ಬೋದಿಗೆ
ವಾಸ್ತುಕಲೆಯಲ್ಲಿ, ಬೋದಿಗೆ ಎಂದರೆ ಒಂದು ಕಂಬದ (ಅಥವಾ ಚೌಕಸ್ತಂಭದ) ಅತ್ಯಂತ ಮೇಲಿನ ಘಟಕವಾಗಿರುತ್ತದೆ. ಇದು ಕಂಬ ಮತ್ತು ಅದರ ಮೇಲೆ ಬೀಳುವ/ಒತ್ತುವ ಭಾರದ ನಡುವೆ ಸಂಬಂಧ ಕಲ್ಪಿಸುತ್ತದೆ, ಮತ್ತು ಕಂಬದ ಆಧಾರಿಕ ಮೇಲ್ಮೈಯ ವಿಸ್ತೀರ್ಣವನ್ನು ಅಗಲವಾಗಿಸುತ್ತದೆ. ಶೀರ್ಷಫಲಕಕ್ಕೆ ಆಧಾರವಾಗಲು ಕಂಬವು ಮೇಲೇರಿದಂತೆ ಅದರ ಪ್ರತಿ ಬದಿಯು ಹೊರಗೆ ಚಾಚಿಕೊಂಡು ಸಾಮಾನ್ಯವಾಗಿ ಚೌಕವಾಗಿರುವ ಶೀರ್ಷಫಲಕ ಮತ್ತು ಕಂಬದ ಸಾಮಾನ್ಯವಾಗಿ ವೃತ್ತಾಕಾರದ ವಿಭಾಗವನ್ನು ಪರಸ್ಪರ ಜೋಡಿಸುತ್ತದೆ. ಬೋದಿಗೆಯು ಪೀನವಾಗಿರಬಹುದು, ಡೋರಿಕ್ ಶೈಲಿಯಲ್ಲಿರುವಂತೆ; ನಿಮ್ನವಾಗಿರಬಹುದು, ಕೊರಿಂಥಿಯನ್ ಶೈಲಿಯ ತಲೆಕೆಳಗಾದ ಗಂಟೆಯಲ್ಲಿರುವಂತೆ; ಹೊರ ಸುರುಳಿಯಾಗಬಹುದು, ಅಯಾನಿಕ್ ಶೈಲಿಯಲ್ಲಿರುವಂತೆ. ಇವು ಮೂರು ಪ್ರಧಾನ ಬಗೆಯ ಬೋದಿಗೆಗಳನ್ನು ರೂಪಿಸುತ್ತವೆ. ಇವುಗಳ ಮೇಲೆ ಪುರಾತನ ಸಂಪ್ರದಾಯದಲ್ಲಿನ ಎಲ್ಲ ಬೋದಿಗೆಗಳು ಆಧಾರಿತವಾಗಿವೆ.
ಉಲ್ಲೇಖಗಳು
[ಬದಲಾಯಿಸಿ]- Lewis, Philippa & Gillian Darley (1986) Dictionary of Ornament, NY: Pantheon
This article incorporates text from a publication now in the public domain: Chisholm, Hugh, ed. (1911). . Encyclopædia Britannica (11th ed.). Cambridge University Press. {{cite encyclopedia}}
: Cite has empty unknown parameters: |separator=
and |HIDE_PARAMETER=
(help); Invalid |ref=harv
(help)