ಕಾಂಬೋಜ
ಕಾಂಬೋಜ ಕಬ್ಬಿಣ ಯುಗದ ಭಾರತದ ಒಂದು ಬುಡಕಟ್ಟಾಗಿತ್ತು, ಮತ್ತು ಆಗಾಗ್ಗೆ ಸಂಸ್ಕೃತ ಹಾಗೂ ಪಾಲಿ ಸಾಹಿತ್ಯದಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಪ್ರಾಚೀನ ಕಾಂಬೋಜರು ಬಹುಶಃ ಇಂಡೊ-ಇರಾನಿಯನ್ ಮೂಲದವರಾಗಿದ್ದರು.[೧] ಆದರೆ, ಅವರನ್ನು ಕೆಲವೊಮ್ಮೆ ಇಂಡೊ-ಆರ್ಯರು ಎಂದು ಮತ್ತು ಕೆಲವೊಮ್ಮೆ ಭಾರತೀಯ ಹಾಗೂ ಇರಾನಿ ಎರಡೂ ಸಂಬಂಧಗಳನ್ನು ಹೊಂದಿದವರು ಎಂದು ವರ್ಣಿಸಲಾಗಿದೆ. ಕಾಂಬೋಜರನ್ನು ಶಕ ರಾಜಮನೆತನದ ಕುಲ ಎಂದೂ ವರ್ಣಿಸಲಾಗಿದೆ.
ಕಾಂಬೋಜರ ಅತ್ಯಂತ ಮುಂಚಿನ ಉಲ್ಲೇಖ ಸುಮಾರು ಕ್ರಿ.ಪೂ. ೫ನೇ ಶತಮಾನದಲ್ಲಿ, ಪಾಣಿನಿಯ ಕೃತಿಗಳಲ್ಲಿದೆ. ಇತರ ಕ್ರಿಸ್ತ ಪೂರ್ವ ಯುಗದ ಉಲ್ಲೇಖಗಳು ಮನುಸ್ಮೃತಿ (೨ನೇ ಶತಮಾನ) ಮತ್ತು ಮಹಾಭಾರತದಲ್ಲಿ ಕಾಣಿಸುತ್ತವೆ. ಇವೆರಡೂ ಕೃತಿಗಳು ಕಾಂಬೋಜರನ್ನು ಪವಿತ್ರ ಹಿಂದೂ ಆಚರಣೆಗಳ ಅನುಸರಣೆಯ ವೈಫಲ್ಯದಿಂದ ಕೆಳದರ್ಜೆಗೆ ಇಳಿದ ಮಾಜಿ ಕ್ಷತ್ರಿಯರು ಎಂದು ವರ್ಣಿಸುತ್ತವೆ. ಅವರ ಪ್ರಾಂತ್ಯಗಳು ಗಾಂಧಾರದ ಆಚೆಗೆ, ಪಾಕಿಸ್ತಾನ, ಅಫ಼್ಘಾನಿಸ್ತಾನದ ಆಚೆಗೆ, ತಜಿಕಿಸ್ತಾನ್, ಉಜ಼್ಬೇಕಿಸ್ತಾನ್, ಕಿರ್ಗಿಸ್ತಾನ್‍ನಲ್ಲಿ ನೆಲೆಗೊಂಡಿದ್ದವು. ಈ ಸ್ಥಳಗಳಲ್ಲಿ ಬುದ್ಧನ ಪ್ರತಿಮೆಗಳನ್ನು ರಾಜ ಅಶೋಕನ ಹೆಸರಲ್ಲಿ ನಿರ್ಮಿಸಲಾಗಿತ್ತು ಮತ್ತು ಅಶೋಕನ ಕ್ರಿ.ಪೂ. ೩ನೇ ಶತಮಾನದ ರಾಜಶಾಸನಗಳು ಕಾಂಬೋಜರ ನಿಯಂತ್ರಣದಲ್ಲಿದ್ದ ಈ ಪ್ರದೇಶ ಮೌರ್ಯ ಸಾಮ್ರಾಜ್ಯದಿಂದ ಸ್ವತಂತ್ರವಾಗಿತ್ತು ಎಂದು ಉಲ್ಲೇಖಿಸುತ್ತವೆ.
ರಾಜಪುರ ಬಹುಶಃ ಕಾಂಬೋಜದ ರಾಜಧಾನಿಯಾಗಿತ್ತು. ಕಾಂಬೋಜರು ಗಣತಂತ್ರವಾದಿ ಸಂವಿಧಾನವನ್ನು ಅನುಸರಿಸುತ್ತಿದ್ದರು ಎಂದು ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಅಶೋಕನ ೧೩ನೇ ಸಂಖ್ಯೆಯ ರಾಜಶಾಸನ ದೃಢೀಕರಿಸುತ್ತವೆ. ರಾಜ ಸ್ರಿಂದ್ರ ವರ್ಮನ ಕಾಂಬೋಜನು ಕಾಂಬೋಜದ ಒಬ್ಬ ರಾಜನಾಗಿದ್ದನು.
ಪ್ರಾಚೀನ ಕಾಲದಲ್ಲಿ ಕಾಂಬೋಜರು ತಮ್ಮ ಶ್ರೇಷ್ಠ ಕುದುರೆಗಳ ತಳಿಗಳು ಮತ್ತು ಉತ್ತರಪಥದ ಅಸಾಮಾನ್ಯ ಅಶ್ವಾರೋಹಿಗಳೆಂದು ಪ್ರಸಿದ್ಧರಾಗಿದ್ದರು. ಅವರನ್ನು ಸೇನಾ ಸಂಘಗಳು ಮತ್ತು ನಿಗಮಗಳಲ್ಲಿ ರಾಜಕೀಯ ಹಾಗೂ ಸೇನಾ ವ್ಯವಹಾರಗಳನ್ನು ನಿರ್ವಹಿಸಲು ನಿಯೋಜಿಸಲಾಗುತ್ತಿತ್ತು. ಕಾಂಬೋಜರ ಅಶ್ವದಳವು ಇತರ ರಾಷ್ಟ್ರಗಳಿಗೂ ತನ್ನ ಸೇನಾ ಸೇವೆಗಳನ್ನು ಒದಗಿಸುತ್ತಿತ್ತು. ಕಾಂಬೋಜದವರನ್ನು ಹೊರಗಿನ ರಾಷ್ಟ್ರಗಳು ಪ್ರಾಚೀನ ಯುದ್ಧಗಳಲ್ಲಿ ಅಶ್ವದಳದ ಸೈನಿಕರಾಗಿ ನಿಯೋಜಿಸಿದ ಅಸಂಖ್ಯಾತ ಉಲ್ಲೇಖಗಳಿವೆ. ಕುದುರೆ ಸಂಸ್ಕೃತಿಯಲ್ಲಿ ಅವರ ಸರ್ವೋಚ್ಚ ಸ್ಥಾನದ ಕಾರಣ ಪ್ರಾಚೀನ ಕಾಂಬೋಜರನ್ನು ಜನಪ್ರಿಯವಾಗಿ ಅಶ್ವಕರು ಎಂದು ಕರೆಯಲಾಗುತ್ತಿತ್ತು. ಅವರು ಉತ್ತಮ ಪಶುಪಾಲಕರು ಮತ್ತು ಕೃಷಿಕರೂ ಆಗಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ Dwivedi 1977: 287 "The Kambojas were probably the descendants of the Indo-Iranians popularly known later on as the Sassanians and Parthians who occupied parts of north-western India in the first and second centuries of the Christian era."