ವಿಷಯಕ್ಕೆ ಹೋಗು

ಸಾಳ್ವ ರಾಜವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯನಗರ ಸಾಮ್ರಾಜ್ಯ
ಸಂಗಮ ವಂಶ
ಹರಿಹರ I 1336–1356
ಬುಕ್ಕ ರಾಯ I 1356–1377
ಹರಿಹರ ರಾಯ II 1377–1404
ವಿರೂಪಾಕ್ಷ ರಾಯ 1404–1405
ಬುಕ್ಕ ರಾಯ II 1405–1406
ದೇವ ರಾಯ I 1406–1422
ರಾಮಚಂದ್ರ ರಾಯ 1422
ವೀರ ವಿಜಯ ಬುಕ್ಕ ರಾಯ 1422–1424
ದೇವ ರಾಯ II 1424–1446
ಮಲ್ಲಿಕಾರ್ಜುನ ರಾಯ 1446–1465
ವಿರೂಪಾಕ್ಷ ರಾಯ II 1465–1485
ಪ್ರೌಢ ರಾಯ 1485
ಸಾಳ್ವ ವಂಶ
ಸಾಳ್ವ ನರಸಿಂಹ ದೇವ ರಾಯ 1485–1491
ತಿಮ್ಮ ಭೂಪಾಲ 1491
ನರಸಿಂಹ ರಾಯ II 1491–1505
ತುಳುವ ವಂಶ
ತುಳುವ ನರಸ ನಾಯಕ 1491–1503
ವೀರ ನರಸಿಂಹ ರಾಯ 1503–1509
ಕೃಷ್ಣ ದೇವ ರಾಯ 1509–1529
ಅಚ್ಯುತ ದೇವ ರಾಯ 1529–1542
ವೆಂಕಟ I 1542
ಸದಶಿವ ರಾಯ 1542–1570
ಅರವೀಡು ವಂಶ
ಆಳಿಯ ರಾಮ ರಾಯ 1542–1565
ತಿರುಮಲ ದೇವ ರಾಯ 1565–1572
ಶ್ರೀರಂಗ I 1572–1586
ವೆಂಕಟ II 1586–1614
ಶ್ರೀರಂಗ II 1614
ರಾಮ ದೇವ ರಾಯ 1617–1632
ವೆಂಕಟ III 1632–1642
ಶ್ರೀರಂಗ III 1642–1646

ಸಾಳ್ವ ರಾಜವಂಶವನ್ನು ಸಾಳ್ವರು ಸ್ಥಾಪಿಸಿದರು. ಅವರ ಮೂಲ ಉತ್ತರ ಕರ್ನಾಟಕದ ಕಲ್ಯಾಣಿ ಪ್ರದೇಶ. ಪಶ್ಚಿಮ ಚಾಲುಕ್ಯರು ಮತ್ತು ಕಲಚೂರಿಗಳ ಕಾಲದಲ್ಲಿ ಅವರು ಈ ಪ್ರದೇಶಕ್ಕೆ ಬಂದಿರುವ ಬಗ್ಗೆ ಗೋರಂಟ್ಲಾ ಶಾಸನವು ತಿಳಿಸುತ್ತದೆ. [] ತದ ನಂತರ ಅವರು ವಲಸೆ ಅಥವಾ ೧೪ನೇ ಶತಮಾನದಲ್ಲಿನ ವಿಜಯನಗರ ಅರಸರ ದಾಳಿಗಳ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಪೂರ್ವ ಕರಾವಳಿಯಲ್ಲಿ ನೆಲೆಸಿದರು. ನಿಘಂಟು ತಜ್ಞರ ಪ್ರಕಾರ "ಸಾಳ್ವ" ಪದದ ಅರ್ಥ ಬೇಟೆಯ ಉಪಯೋಗಕ್ಕಾಗಿ ಬಳಸುವ "ಗಿಡುಗ".

ಸಾಳ್ವ ನರಸಿಂಹ ದೇವರಾಯನ ಮುತ್ತಜ್ಜ ಮಂಗಲದೇವನೇ 'ಮೊದಲ ಸಳುವ' ಎಂದು ಶಾಸನದ ಪುರಾವೆಗಳಿಂದ ತಿಳಿದು ಬಂದಿದೆ. ಮಂಗಲದೇವನ ವಂಶಸ್ಥರು ಸಾಳ್ವ ರಾಜವಂಶವನ್ನು ಸ್ಥಾಪಿಸಿದರು ಹಾಗೂ ಇವರ ವಂಶವು ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯದ ರಾಜವಂಶಗಳಲ್ಲಿ ಒಂದು.[] ಮಧುರೈನ ಸುಲ್ತಾನರ ವಿರುದ್ಧದ ಯದ್ಧಗಳಲ್ಲಿ ಮೊದಲನೇ ಬುಕ್ಕರಾಯ ವಿಜಯಿಯಾಗಲು ಮಂಗಲದೇವ ಪ್ರಮುಖ ಪಾತ್ರವನ್ನು ವಹಿಸಿದನು. ೧೪೮೫ ರಿಂದ ೧೫೦೫ ರವರೆಗೆ ಈ ವಂಶದ ಮೂರು ರಾಜರು ಆಳ್ವಿಕೆ ನಡೆಸಿದರು, ನಂತರ ಆಳ್ವಿಕೆ ಪ್ರಾರಂಭಿಸಿದ ತುಳುವ ರಾಜವಂಶವು ವಿಜಯನಗರವನ್ನು ತಮ್ಮ ರಾಜಧಾನಿಯಾಗಿಟ್ಟುಕೊಂಡು ಇಡೀ ದಕ್ಷಿಣ ಭಾರತವನ್ನು ಆಳಿದರು.

ಸಾಳ್ವ ನರಸಿಂಹ ೧೪೮೬ ರಿಂದ ೧೪೯೧ ರವರೆಗೆ ಆಳಿದ ರಾಜವಂಶದ ಮೊದಲ ರಾಜ. [] ಅವನು ತನ್ನ ಆಳ್ವಿಕೆಯ ಕಾಲದಲ್ಲಿ ತನ್ನ ಸಾಮ್ರಾಜ್ಯದ ಸಾಮಂತರ ಉಪಟಳವನ್ನು ಯಶಸ್ವಿಯಾಗಿ ಹತ್ತಿಕ್ಕಿದನು. ಹಾಗೆಯೇ, ಬಹಮನಿ ಅರಸರ ಕೈವಶವಾಗಿದ್ದ ಕುದುರೆ ವ್ಯಾಪಾರವನ್ನು ಪುನರುಜ್ಜೀವನಗೊಳಿಸಲು ಪಶ್ಚಿಮ ಕರಾವಳಿಯಲ್ಲಿ ಹೊಸ ಬಂದರುಗಳನ್ನು ತೆರೆದನು. ಆದರೆ, ಒರಿಸ್ಸಾದ ಸೂರ್ಯವಂಶದ ರಾಜನ ಅತಿಕ್ರಮಣವನ್ನು ತಡೆಯಲು ಅವನಿಗೆ ಸಾಧ್ಯವಾಗಲಿಲ್ಲ.

ಒರಿಸ್ಸಾದ ಸೂರ್ಯವಂಶಿ ರಾಜನಿಂದ ಉದಯಗಿರಿಯ ಮುತ್ತಿಗೆಯಲ್ಲಿ ರಾಜ ನರಸಿಂಹನು ಸೋತು ಸೆರೆವಾಸ ಅನುಭವಿಸಿ ನಂತರ ೧೪೯೧ ರಲ್ಲಿ ಮರಣ ಹೊಂದಿದನು. ತನ್ನ ಪುತ್ರರು ಇನ್ನೂ ಸಿಂಹಾಸನವನ್ನು ವಹಿಸಿಕೊಳ್ಳುವ ಸಾಮರ್ಥ್ಯಹೊಂದಿಲ್ಲವೆಂದು ಭಾವಿಸಿದ ಅವನು, ರಾಜ್ಯಭಾರವನ್ನು ತನ್ನ ಅತ್ಯಂತ ವಿಶ್ವಾಸಾರ್ಹ ಮುಖ್ಯಮಂತ್ರಿ ನರಸ ನಾಯಕನಿಗೆ ವಹಿಸಿದನು. ಮಂತ್ರಿ ನರಸ ನಾಯಕನು ೧೪೯೦ ರಿಂದ ೧೫೦೩ ರವರೆಗಿನ ತನ್ನ ಮರಣದ ವರೆಗೂ ವಿಜಯನಗರವನ್ನು ಆಳಿದನು. ನರಸಿಂಹನ ಹಿರಿಯ ಮಗ ತಿಮ್ಮಭೂಪ ೧೪೯೨ ರಲ್ಲೇ ನರಸನ ಶತ್ರುಗಳಲ್ಲಿ ಒಬ್ಬನಾಗಿದ್ದ ಸೇನಾ ಕಮಾಂಡರ್ ನಿಂದ ಹತನಾಗಿದ್ದನು. ಆದ್ದರಿಂದ, ಅವನ ಕಾಲಾನಂತರ ನರಸಿಂಹನ ಕಿರಿಯ ಮಗ, ಇಮ್ಮಡಿ ನರಸಿಂಹರಾಯ ಸಿಂಹಾಸನಾರೂಢನಾದ. ಅವನನ್ನು ರಾಜ ಎಂದು ಹೆಸರಿಸಲಾಗಿದ್ದರೂ, ರಾಜ್ಯದ ಅಧಿಕೃತ ನಿಯಂತ್ರಣವು ಮಂತ್ರಿ ನರಸನಾಯಕನ ಹಿರಿಯ ಮಗ ವೀರನರಸಿಂಹನ ಕೈಯಲ್ಲಿತ್ತು. ೧೫೦೫ ರಲ್ಲಿ ವೀರನರಸಿಂಹನು ಇಮ್ಮಡಿ ನರಸಿಂಹನ ಹತ್ಯೆ ಮಾಡಿಸಿ ಸಿಂಹಾಸನವನ್ನು ಏರುವುದರೊಂದಿಗೆ ವಿಜಯನಗರದ ಮೂರನೇ ರಾಜವಂಶವಾದ ತುಳುವ ರಾಜವಂಶದ ಆಳ್ವಿಕೆ ಆರಂಭವಾಯಿತು. ಹೀಗೆ, ವೀರನರಸಿಂಹನು ೧೫೦೩ ರಿಂದ ೧೫೦೯ರವರೆಗೆ ಆಳ್ವಿಕೆ ನಡೆಸಿದನು.

ಟಿಪ್ಪಣಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Durga Prasad, p219
  2. Sen, Sailendra (2013). A Textbook of Medieval Indian History. Primus Books. p. 108. ISBN 978-9-38060-734-4.