ವೀಕ್ಷಣೆ
ವೀಕ್ಷಣೆಯು ಒಂದು ಪ್ರಾಥಮಿಕ ಮೂಲದಿಂದ ಮಾಹಿತಿಯ ಸಕ್ರಿಯ ಅರ್ಜನೆ. ಜೀವಿಗಳಲ್ಲಿ, ವೀಕ್ಷಣೆಯು ಇಂದ್ರಿಯಗಳನ್ನು ಬಳಸಿಕೊಳ್ಳುತ್ತದೆ. ವಿಜ್ಞಾನದಲ್ಲಿ, ವೀಕ್ಷಣೆಯು ಉಪಕರಣಗಳ ಬಳಕೆಯ ಮೂಲಕ ದತ್ತದ ದಾಖಲಿಸುವಿಕೆಯನ್ನೂ ಒಳಗೊಳ್ಳಬಹುದು. ವೀಕ್ಷಣೆಗಳು ಗುಣಾತ್ಮಕವಾಗಿರಬಹುದು, ಅಂದರೆ, ಒಂದು ಗುಣಲಕ್ಷಣದ ಉಪಸ್ಥಿತಿ ಅಥವಾ ಅನುಪಸ್ಥಿತಿಯನ್ನು ಮಾತ್ರ ಗಮನಿಸಲಾಗುತ್ತದೆ, ಅಥವಾ ಗಮನಿಸಲಾದ ವಿದ್ಯಮಾನಕ್ಕೆ ಎಣಿಕೆ ಅಥವಾ ಮಾಪನದ ಮೂಲಕ ಒಂದು ಸಾಂಖ್ಯಿಕ ಮೌಲ್ಯವನ್ನು ಲಗತ್ತಿಸಿದರೆ ಪರಿಮಾಣಾತ್ಮಕವಾಗಿರಬಹುದು.
ವೈಜ್ಞಾನಿಕ ವಿಧಾನಕ್ಕೆ ಊಹನಗಳನ್ನು ಸೂತ್ರೀಕರಿಸಲು ಮತ್ತು ಪರೀಕ್ಷಿಸಲು ಪ್ರಕೃತಿಯ ವೀಕ್ಷಣೆಗಳು ಬೇಕಾಗುತ್ತದೆ.[೧] ಅದು ಈ ಕ್ರಮಗಳನ್ನು ಒಳಗೊಳ್ಳುತ್ತದೆ:
- ಒಂದು ಪ್ರಾಕೃತಿಕ ವಿದ್ಯಮಾನದ ಬಗ್ಗೆ ಪ್ರಶ್ನೆ ಕೇಳುವುದು
- ವಿದ್ಯಮಾನದ ವೀಕ್ಷಣೆಗಳನ್ನು ಮಾಡುವುದು
- ವಿದ್ಯಮಾನಕ್ಕಾಗಿ ಒಂದು ವಿವರಣೆಯನ್ನು ಊಹಿಸುವುದು
- ಇನ್ನೂ ತನಿಖೆ ಮಾಡಲಾಗದ ಊಹನದ ತಾರ್ಕಿಕ, ಗಮನಿಸಬಹುದಾದ ಪರಿಣಾಮಗಳನ್ನು ಮುನ್ನುಡಿಯುವುದು
- ಊಹನದ ಭವಿಷ್ಯವನ್ನು ಪ್ರಯೋಗ, ವೀಕ್ಷಣ ಅಧ್ಯಯನ, ಕ್ಷೇತ್ರ ಅಧ್ಯಯನ, ಅಥವಾ ಪ್ರತ್ಯನುಕರಣೆ ಮೂಲಕ ಪರೀಕ್ಷಿಸುವುದು
- ಪ್ರಯೋಗದಲ್ಲಿ ಸಂಗ್ರಹಿಸಲಾದ ದತ್ತದಿಂದ ತೀರ್ಮಾನವನ್ನು ರೂಪಿಸುವುದು, ಅಥವಾ ಪರಿಷ್ಕೃತ/ಹೊಸ ಊಹನವನ್ನು ಮಾಡುವುದು ಮತ್ತು ಪ್ರಕ್ರಿಯೆಯನ್ನು ಪುನರಾವರ್ತಿಸುವುದು
- ವೀಕ್ಷಣಾ ವಿಧಾನ ಮತ್ತು ತಲುಪಲಾದ ಫಲಿತಾಂಶಗಳು ಅಥವಾ ತೀರ್ಮಾನಗಳ ವಿವರಣೆಯನ್ನು ಬರೆಯುವುದು
- ಅದೇ ವಿದ್ಯಮಾನವನ್ನು ಸಂಶೋಧಿಸುತ್ತಿರುವ ಅನುಭವಿ ಸಮಾನಸ್ಕಂಧರಿಂದ ಫಲಿತಾಂಶಗಳ ಪುನರ್ಪರಿಶೀಲನೆ
ವೈಜ್ಞಾನಿಕ ವಿಧಾನದ ಎರಡನೇ ಮತ್ತು ಐದನೇ ಕ್ರಮಗಳಲ್ಲಿ ವೀಕ್ಷಣೆಗಳು ಪಾತ್ರವಹಿಸುತ್ತವೆ. ಆದರೆ ಪುನರುತ್ಪಾದ್ಯತೆಯ ಅಗತ್ಯಕ್ಕೆ ಭಿನ್ನ ವೀಕ್ಷಕರ ವೀಕ್ಷಣೆಗಳು ಹೋಲಿಸಬಲ್ಲಂತಾಗಿರುವುದು ಬೇಕಾಗುತ್ತದೆ. ಮಾನವ ಇಂದ್ರಿಯ ಅನಿಸಿಕೆಗಳು ವ್ಯಕ್ತಿನಿಷ್ಠ ಮತ್ತು ಪರಿಣಾಮಾತ್ಮಕವಾಗಿರುತ್ತವೆ, ಹಾಗಾಗಿ ಅವನ್ನು ದಾಖಲಿಸುವುದು ಮತ್ತು ಹೋಲಿಸುವುದು ಕಷ್ಟಕರ. ಭಿನ್ನ ಸಮಯಗಳು ಮತ್ತು ಸ್ಥಳಗಳಲ್ಲಿ ಭಿನ್ನ ಜನರಿಂದ ಮಾಡಲ್ಪಟ್ಟ ವೀಕ್ಷಣೆಗಳ ದಾಖಲಿಸುವಿಕೆ ಮತ್ತು ಹೋಲಿಕೆಗೆ ಅವಕಾಶ ಮಾಡಿಕೊಡಲು ಮಾಪನದ ಬಳಕೆ ಅಭಿವೃದ್ಧಿಗೊಂಡಿತು.
ಉಲ್ಲೇಖಗಳು
[ಬದಲಾಯಿಸಿ]- ↑ Kosso, Peter (2011). A Summary of Scientific Method. Springer. p. 9. ISBN 9400716133.