ಮಾಪನಾಂಕ ನಿರ್ಣಯ (ಅಳತೆಯ ಅಂಕಿ)
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(January 2010) |
ಮಾಪನಾಂಕ ನಿರ್ಣಯ ವೆಂದರೆ ನಿರ್ದಿಷ್ಟ ಮಾಪನ ವಿಧಾನಗಳು ಮತ್ತು ಸಾಧನವನ್ನು ಕ್ರಮಬದ್ದಗೊಳಿಸುವುದಾಗಿದೆ.ಅಂತರ್ವ್ಯಾಸದ ಅಥವಾ ಒಳ ಅಳತೆಯನ್ನು ಪ್ರಮಾಣೀಕರಿಸಿ ಅದನ್ನು ಕಂಡುಹಿಡಿಯುವ ಪ್ರಕ್ರಿಯೆಯು ಕ್ಯಾಲಿಬ್ರೇಶನ್ ಎನಿಸುತ್ತದೆ. ಸರಳವಾಗಿ ಹೇಳಬೇಕೆಂದರೆ ಆಯಾ ಮಟ್ಟದಲ್ಲಿ ಮಾಪನಾಂಕ ನಿರ್ಣಯವು ಮಾಪನಗಳ ನಡುವಿನ ವ್ಯತ್ಯಾಸದ ಹೋಲಿಕೆಯಾಗಿದೆ-ಒಂದು ಸಾಧನದೊಂದಿಗೆ ಹೊಂದಿಕೊಂಡ ಅಳತೆ ಅಥವಾ ನಿಖರತೆಯು, ಅದೇ ಮಾಪನವನ್ನು ಬಳಸುವುದರಿಂದ ಎರಡನೇ ಸಾಧನವನ್ನು ಅದೇ ರೀತಿ ಮಾಡಲು ಸಾಧ್ಯ.
ಪರಿಚಿತ ಅಥವಾ ನಿರ್ದಿಷ್ಟ ಪಡಿಸಿದ ನಿಖರತೆಯನ್ನು ಹೊಂದಿರುವ ಸಾಧನವನ್ನು ಗುಣಮಟ್ಟ ಕಂಡುಹಿಡಿಯುವ ಮಾನದಂಡ ಎಂದು ಕರೆಯುವರು. ಪ್ರಯೋಗದಲ್ಲಿರುವ ಘಟಕ (UUT), ಪರೀಕ್ಷಾ ಸಾಧನ (TI), ಅಥವಾ ಮಾಪನಾಂಕವನ್ನು ನಿರ್ಣಯಿಸಬೇಕಿರುವ ಸಾಧನಗಳಿಗೆ ಯಾವುದೇ ಇತರ ಹೆಸರುಗಳನ್ನು ಬಳಸುವುದು ಎರಡನೇ ವಿಧಾನವಾಗಿದೆ.
ಇತಿಹಾಸ
[ಬದಲಾಯಿಸಿ]ಪ್ರಾಚೀನ ಮಾಪನ ಸಾಧನಗಳು ಅಂತರ್ಬೋಧೆಯ ಗ್ರಹಿತದಿಂದ ಕೂಡಿದ್ದು, ಕಲ್ಪನಾತ್ಮಕವಾಗಿ ಅವುಗಳನ್ನು ಮೌಲ್ಯೀಕರಣಗೊಳಿಸುವುದು ಸುಲಭವಾಗಿದೆ. ವಿಭಾಗೀಯ ಯಂತ್ರವನ್ನು ಬಳಸಿ ರೇಖೀಯ ದೂರ ಮತ್ತು ಕೋನಗಳನ್ನು ಅಳೆಯುವುದು, ಅಲ್ಲದೇ ತೂಕ ಮಾಡುವ ಯಂತ್ರವನ್ನು ಬಳಸಿ ಗುರುತ್ವ ದ್ರವ್ಯರಾಶಿ ಅಳೆಯಲು "ಮಾಪನಾಂಕ ನಿರ್ಣಯ" ಎಂಬ ಪದವನ್ನು ಮೊದಲ ಬಳಸಲಾಗುತ್ತಿತ್ತು. ಎರಡು ಪ್ರಕಾರದ ಅಳತೆ ಮಾಪನಗಳಿವೆ.ಅಲ್ಲದೇ ಅವುಗಳ ಮೂಲಗಳು ಹುಡುಕುತ್ತಾ ಹೋದರೆ ಸುಮಾರು 1800ADರವರೆಗಿನ ಎಲ್ಲಾ ನಾಗರಿಕತೆ ಮತ್ತು ಎಲ್ಲಾ ವಾಣಿಜ್ಯ ಮತ್ತು ತಂತ್ರಜ್ಞಾನಗಳು ಈ ಮಾಪನಾಂಕದ ಅಭಿವೃದ್ಧಿಯನ್ನು ಬೆಂಬಲಿಸಿವೆ.
ಕೈಗಾರಿಕಾ ಕ್ರಾಂತಿಯು ಪರೋಕ್ಷ ಮಾಪನದ ವಿಸ್ತೃತ ಅಳತೆಯ ಬಳಕೆಯನ್ನು ಪರಿಚಯಿಸಿದೆ. ಪರೋಕ್ಷ ಮಾಪನವನ್ನು ಅದೇ ಸಂದರ್ಭದಲ್ಲಿ ಅಸ್ಥಿತ್ವದಲ್ಲಿರುವ ನೇರ ಮಾಪನಕ್ಕೆ ಹೇಗೆ ಸೇರಿಸುವುದು ಎನ್ನುವುದಕ್ಕೆ ಒತ್ತಡ ಮಾಪನ ಮೊದಲ ಉದಾಹರಣೆಯಾಗಿದೆ.
ಕೈಗಾರಿಕಾ ಕ್ರಾಂತಿಯ ಮೊದಲು, ದ್ರವಸ್ಥಿತಿಸಮತೋಲನ ಮತ್ತು ಒತ್ತಡ ಕಂಡು ಹಿಡಿಯುವ ಮಾನೊಮೀಟರ್ ಸಾಮಾನ್ಯ ಒತ್ತಡ ಅಳೆಯುವ ಸಾಧನವಾಗಿತ್ತು. ಇದರಲ್ಲಿ ಹೆಚ್ಚಿನ ಒತ್ತಡವನ್ನು ಅಳೆಯಲಾಗುತ್ತಿರಲಿಲ್ಲ. ಏಗೆನ್ ಬೋರ್ಡನ್, ಆತನಬೋರ್ಡನ್ ನಳಿಗೆ ಒತ್ತಡ ಅಳತೆಯ ಮಾಪಕದಲ್ಲಿ ಹೆಚ್ಚಿನ ಮಾಪನದ ಸಾಮರ್ಥ್ಯ ತುಂಬಿದನು.
ಎಡಗಡೆಯಲ್ಲಿರುವ ನೇರ ಸೂಚ್ಯಾಂಕ ದ್ರವಸ್ಥಿತಿ ಕಂಡುಹಿಡಿಯುವ ಮಾನೊಮೀಟರ್ ವಿನ್ಯಾಸದಲ್ಲಿ, ಅಜ್ಞಾತ ಒತ್ತಡವು ಮಾನೊಮೀಟರ್ U-ಟ್ಯೂಬ್‌ನ ಎಡಗಡೆಯಲ್ಲಿ ದ್ರವವನ್ನು ಕೆಳಗೆ ತಳ್ಳುತ್ತದೆ. (ಅಥವಾ ಅಜ್ಞಾತ ನಿರ್ವಾತ ಪ್ರದೇಶವು ಕೊಳವೆಯ ಮೇಲ್ಗಡೆ ದ್ರವವನ್ನು ತಳ್ಳುವುದು) ಕೊಳವೆಯ ನಂತರವಿರುವ ಉದ್ದದ ಅಳತೆಯು ಒತ್ತಡವನ್ನು ಅಳೆಯುವುದು. U-ಟ್ಯೂಬ್‌ನ ಬಲಗಡೆಯಲ್ಲಿ ಮಾನೊಮೀಟರ್‌ನ ತೆರೆದ ತುದಿಯಲ್ಲಿ ಇತರ ಅಳತೆಗಳನ್ನು ಪ್ರದರ್ಶಿಸುವುದು. ಎತ್ತರದ ವ್ಯತ್ಯಾಸದಲ್ಲಾದ ಪರಿಣಾಮ"H" ವಾಯುಮಂಡಲದ ಒತ್ತಡಕ್ಕೆ ಸಂಬಂಧಿಸಿದ ಒತ್ತಡ ಮತ್ತು ನಿರ್ವಾತಪ್ರದೇಶದ ನೇರ ಮಾಪಕವಾಗಿದೆ. ಒತ್ತಡ ಮತ್ತು ನಿರ್ವಾತಪ್ರದೇಶದ ಅನುಪಸ್ಥಿತಿಯು H=0 ಆಗಿರುವುದು. ಸ್ವಯಂ-ಅನ್ವಯಿತ ಮಾಪನಾಂಕ ನಿರ್ಣಯವು ಒಂದೇ ಬಿಂದುವಿನಲ್ಲಿ ಅದನ್ನು ಸೊನ್ನೆಗೆ ಹೊಂದಿಸಿರಬೇಕಾಗುತ್ತದೆ.
ಬಲಗಡೆಯಲ್ಲಿ ಎರಡು ವೀಕ್ಷಣೆಯಲ್ಲಿ ತೋರಿಸಲಾದ ಬೋರ್ಡನ್ ನಳಿಗೆಯು applied ಒತ್ತಡ entering from the bottom on the silver barbed pipe tries to straighten a ಬಾಗಿದ ನಳಿಕೆ (ಅಥವಾ ನಿರ್ವಾತ ಪ್ರದೇಶ tries to curl the ನಳಿಕೆ to a greater extent), moving the free end of the ನಳಿಕೆ that is mechanically connected to the pointer. ಪರೋಕ್ಷ ಮಾಪನವು ಮಾಪನಾಂಕದ ಒಳ ಅಳತೆಯ ನಿರ್ಣಯವನ್ನಾಧರಿಸಿ, ಒತ್ತಡ ಅಥವಾ ನಿರ್ವಾತಪ್ರದೇಶವನ್ನು ಸೂಕ್ತವಾಗಿ ಅಳೆಯುವುದು. ಯಾವುದೇ ಸ್ವಯಂ-ಮಾಪನಾಂಕ ನಿರ್ಣಯ ಸಾಧ್ಯವಾಗುವುದಿಲ್ಲ, ಆದರೆ ಸಾಮಾನ್ಯವಾಗಿ ಶೂನ್ಯ ಒತ್ತಡ ಸ್ಥಿತಿಯಲ್ಲಿ ಅದನ್ನು ಸರಿಪಡಿಸಬಹುದು.
ಇತ್ತೀಚಿನ ದಿನಗಳಲ್ಲಿ ನೇರ ಮಾಪನವನ್ನು ಮಾಪನಗಳ ಮೌಲ್ಯಿಕತೆಯ (validity) ನ್ನು ಹೆಚ್ಚುಗೊಳಿಸಲು ಬಳಸುವರು.
USನಲ್ಲಿ ಪ್ರಾರಂಭದಲ್ಲಿ ಆಟೋಮೊಬೈಲ್‌ಗೆ ಬಳಸಲಾಗುವ ಗ್ಯಾಸೋಲಿನ್ ಅನ್ನು ಹಲವರು ನೋಡಲು ಬಯಸುತ್ತಿದ್ದರು. ಅವರು ದೊಡ್ಡ ಹೂಜಿಯಷ್ಟು ಖರೀದಿಸಿ, ಗೋಚರಿಕೆಯಿಂದಲೇ ಅದರ ಪ್ರಮಾಣ ಮತ್ತು ಗುಣಮಟ್ಟವನ್ನು ನೇರವಾಗಿ ಅಳೆಯುತ್ತಿದ್ದರು. 1930ರ ಹೊತ್ತಿಗೆ ಆವರ್ತಕ ಫ್ಲೋಮೀಟರ್‌ಗಳು ಪರೋಕ್ಷ ಪರ್ಯಾಯಗಳಾಗಿ ಅನುಮೋದನೆ ಪಡೆದವು. ಮೇಲೆ ಬಲಗಡೆಯಲ್ಲಿರುವ ಚಿತ್ರದಲ್ಲಿ ಕಾಣಿಸಿದಂತೆ (ದರ ಪಟ್ಟಿ ನೊಂದಣಿ ಮೇಲೆ) ಅರೆಗೋಳಭಾಗವಾಗಿದ್ದು, ಅಲ್ಲಿ ಗ್ಯಾಸೋಲಿನ್ ಪಂಪ್ ಮಾಡಿದಂತೆ ಫ್ಲೋಮೀಟರ್‌ನ ಅಲಗು ತಿರುಗುವುದನ್ನು ಕಾಣಬಹುದು. ಸುಮಾರು 1970ರ ಹೊತ್ತಿಗೆ ಈ ಕಿಟಕಿ ಮಾದರಿಗಳು ಮೂಲೆ ಸೇರಿದವು. ಮಾಪನ ಸಂಪೂರ್ಣವಾಗಿ ಪರೋಕ್ಷವಾಗಿತ್ತು.
ಪರೋಕ್ಷ ಮಾಪನ ಕೆಲವು ಸಂಯೋಜನೆ ಅಥವಾ ಪರಿವರ್ತನೆಗಳನ್ನು ಒಳಗೊಂಡಿತ್ತು. ಒಳ ಆಳತೆ ಅಥವಾ ಮಾಪನವನ್ನು ಸಂಪೂರ್ಣವಾಗಿ ಗ್ರಹಿತವಾದ ರೂಪದಲ್ಲಿ ಪರೀಕ್ಷಿಸುವುದು ಸಾಧ್ಯವಿಲ್ಲ. ಈ ವಾಸ್ತವಿಕ ಅಂಶಗಳು ಮಾಪನಾಂಕ ನಿರ್ಣಯಕ್ಕೆ ಬೇಕಾಗಿರುವ ಅಗತ್ಯಗಳನ್ನು ಹೆಚ್ಚಿಸುತ್ತವೆ.
ಇಂದು ಬಳಸುವ ಹೆಚ್ಚಿನ ಮಾಪನ ವಿಧಾನಗಳು ಪರೋಕ್ಷ ಮಾಪನ ವಿಧಾನಗಳಾಗಿವೆ.
ಅಳತೆಯ ಅಂಕಿ-ಅಂಶ ನಿರ್ಣಯ ಮತ್ತು ಅದಕ್ಕೆ ಸ್ಪರ್ಧಿಯಾಗಿ ಮಾಪನಶಾಸ್ತ್ರ.
[ಬದಲಾಯಿಸಿ]ಮಾಪನಾಂಕ ನಿರ್ಣಯ ಮತ್ತು ಮಾಪನಶಾಸ್ತ್ರದ ನಡುವೆ ಯಾವುದೇ ಧೃಡ ವಿಭಜನೆ ಇಲ್ಲ. ಸಾಮಾನ್ಯವಾಗಿ, ಮೂಲ ತಳಪಾಯದ ಪ್ರಕ್ರಿಯೆಯಲ್ಲಿ ಹೊಸ ಅಥವಾ ಸಾಮಾನ್ಯವಲ್ಲದ ಸಾಧನ ಮತ್ತು ಪ್ರಕ್ರಿಯೆಗಳು ಒಂದಾದರೆ, ಅವುಗಳು ಮಾಪನಶಾಸ್ತ್ರವನ್ನು ಕೇಂದ್ರಿಕರಿಸುತ್ತವೆ. ಉದಾಹರಣೆಗೆ, ಯಶಸ್ವಿ ಮೈಕ್ರೋಫೋನ್‌ಗಳ ತಯಾರಕರ ಮಾಪನಾಂಕ ನಿರ್ಣಯ ಪ್ರಯೋಗಾಲಯವು ವಿದ್ಯುನ್ಮಾನಗಳನ್ನು ವಕ್ರ ಅಥವಾ ವಿಕಾರಗೊಳಿಸುವಿಕೆ ಮತ್ತು ಧ್ವನಿ ಒತ್ತಡ ಮಾಪನದಲ್ಲಿ ಸಮರ್ಥವಾಗಿರುತ್ತದೆ. ಅವುಗಳಿಗೆ ಹೊಸ ಕಂಪನಾಂಕ ವಿವಿಧ ವರ್ಣಗಳ ವಿಶ್ಲೇಷಕದ ಮಾಪನಾಂಕ ನಿರ್ಣಯವು ವ್ಯಾಪಕ ಪೂರ್ವನಿದರ್ಶನದೊಂದಿಗೆ ಸೇರಿಕೊಳ್ಳುವುದು ನಿಯಮಿತ ವಿಷಯವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಏಕಾಕ್ಷ ತಂತಿ ತಯಾರಕರ ಅಂತಹ ಪ್ರಯೋಗಾಲಯಗಳು ಈ ನಿರ್ದಿಷ್ಟ ಮಾಪನಾಂಕ ನಿರ್ಣಯ ವಿಷಯಗಳೊಂದಿಗೆ ಪರಿಚಿತವಾಗಿಲ್ಲದಿರಬಹುದು. ಮೈಕ್ರೋಫೋನ್ ಅಪ್ಲಿಕೇಶನ್‌ಗೆ ಬೆಂಬಲಿಸಿ ಕೆಲಸ ಮಾಡಿ ಕಸಿ ಮಾಡಿದ ಮಾಪನಾಂಕ ನಿರ್ಣಯ ಪ್ರಕ್ರಿಯೆಯು ಉತ್ತಮ ಸಲಹೆ ಆಗಿರಬಹುದು, ಅಥವಾ ಆಗಿಲ್ಲದೆ ಇರಬಹುದು ಅಥವಾ ಏಕಾಕ್ಷ ನೆಲತಂತಿ ಅಳವಡಿಕೆಗೂ ಸಹ ಸೂಕ್ತವಾಗಿರಬಹುದು ಅಥವಾ ಆಗಿರದೆಯೂ ಇರಬಹುದು. ಏಕಾಕ್ಷ ತಂತಿ ತಯಾರಿಕೆಯ ಮಾಪನ ಅಗತ್ಯಕತೆಗಳನ್ನು ತಿಳಿದುಕೊಳ್ಳುವ ಮೊದಲು ಮಾಪನಾಂಕ ನಿರ್ಣಯದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮಾಡಿರಬೇಕು.
ಮೂಲಭೂತ ಮಾಪನಾಂಕ ನಿರ್ಣಯ ಪ್ರಕ್ರಿಯೆ
[ಬದಲಾಯಿಸಿ]ಮಾಪನಾಂಕ ನಿರ್ಣಯ ಪ್ರಕ್ರಿಯೆಯು ಮಾಪನಾಂಕ ನಿರ್ಣಯಿಸಲು ಅಗತ್ಯವಿರುವ ಅಳತೆ ಸಾಧನಗಳ ವಿನ್ಯಾಸದೊಂದಿಗೆ ಪ್ರಾರಂಭವಾಗುವುದು. ವಿನ್ಯಾಸದ ಮಧ್ಯಂತರ ಮಾಪನಾಂಕ ನಿರ್ಣಯದ ಮೂಲಕ "ಮಾಪನಾಂಕ ನಿರ್ಣಯವನ್ನು ಹಿಡಿದಿಟ್ಟುಕೊಳ್ಳಬೇಕು". ಇನ್ನೊಂದು ರೀತಿಯಲ್ಲಿ, ವಿನ್ಯಾಸವು ತರ್ಕಬದ್ಧ ಅವಧಿಯಲ್ಲಿ ನಿರ್ದಿಷ್ಟಪಡಿಸಿದ ಪರಿಸರದೊಳಗೆ "ಇಂಜಿನಿಯರಿಂಗ್ (ಹೊಸ ರಚನಾ ಪದ್ದತಿಯನ್ನು) ತಡೆದುಕೊಳ್ಳುವ ಶಕ್ತಿಯನ್ನು" ಹೊಂದಿರಬೇಕು. ಈ ಲಕ್ಷಣಗಳನ್ನು ಹೊಂದಿರುವ ವಿನ್ಯಾಸವು ನಿರೀಕ್ಷಿಸಿದಂತೆ ನಿಜವಾದ ಅಳತೆ ಸಲಕರಣೆಗಳು ಕೆಲಸ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ನಿರ್ದಿಷ್ಟ ಸಹನೀಯ ವ್ಯತ್ಯಾಸದ ತಾಳಿಕೆಯ ಮೌಲ್ಯಗಳಿಗೆ ನಿಖರ ಯಂತ್ರರಚನೆಯು ದೇಶದಿಂದ ದೇಶಕ್ಕೆ ಮತ್ತು ಉದ್ಯಮದಿಂದ ಉದ್ಯಮಕ್ಕೆ ಬದಲಾಗುತ್ತಿರುತ್ತದೆ. ಅಳತೆ ಸಾಧನಗಳ ತಯಾರಕರು ಸಾಮಾನ್ಯವಾಗಿ ಮಾಪನ ಬಾಳಿಕೆಯನ್ನು ನಿಗದಿಪಡಿಸಿ, ಮಾಪನಾಂಕ ನಿರ್ಣಯ ಮಧ್ಯಂತರ ಕಾಲಮಾನವನ್ನು ಸಲಹೆ ಮಾಡಿರುತ್ತಾರೆ. ಅಲ್ಲದೇ ಬಳಕೆ ಮತ್ತು ಸಂಗ್ರಹದ ಪರಿಸರ ವ್ಯಾಪ್ತಿಯನ್ನು ನಿರ್ದಿಷ್ಟಪಡಿಸಿರುತ್ತಾರೆ. ಬಳಕೆ ಮಾಡುತ್ತಿರುವ ಸಂಸ್ಥೆಯು ಸಾಮಾನ್ಯವಾಗಿ ನಿಜವಾದ ಮಾಪನಾಂಕ ನಿರ್ಣಯ ಮಧ್ಯಂತರವನ್ನು ನಿಗದಿಪಡಿಸುವುದು. ಇದು ಬಳಕೆಯ ಮಟ್ಟದಂತೆಯೇ ಈ ನಿರ್ದಿಷ್ಟ ಅಳತೆ ಸಾಧನಗಳನ್ನು ಆಧರಿಸಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರತಿ ವಾರ ೫ ದಿನಗಳಲ್ಲಿ ೮-೧೨ ಗಂಟೆಯ ಬಳಕೆಗೆ ಸಾಮಾನ್ಯ ಮಧ್ಯಂತರವು ಆರು ತಿಂಗಳಾಗಿವೆ. ೨೪/೭ ಅವಧಿಯಲ್ಲಿ ಬಳಕೆಯಲ್ಲಿರುವ ಕೆಲವು ಸಲಕರಣೆಗಳು ಕಡಿಮೆ ಅವಧಿಯ ಮಧ್ಯಂತರವನ್ನು ಹೊಂದಿದೆ. ಮಾಪನಾಂಕ ನಿರ್ಣಯ ಮಧ್ಯಂತರಗಳ ಹಂಚಿಕೆವು ಹಿಂದಿನ ಮಾಪನಾಂಕ ನಿರ್ಣಯಗಳ ಫಲಿತಾಂಶದ ಆಧಾರದ ಮೇಲೆ ಮೂಲಭೂತ ಪ್ರಕ್ರಿಯೆಯಾಗಿರಬಹುದು.
ಮುಂದಿನ ಹೆಜ್ಜೆಯೆಂದರೆ ಮಾಪನಾಂಕ ನಿರ್ಣಯ ಪ್ರಕ್ರಿಯೆಯನ್ನು ವ್ಯಾಖ್ಯಾನಿಸುವುದು. ಮಾನದಂಡ ಅಥವಾ ಮಾನದಂಡಗಳ ಆಯ್ಕೆಯು ಮಾಪನಾಂಕ ನಿರ್ಣಯ ಪ್ರಕ್ರಿಯೆಯ ಹೆಚ್ಚು ಗೋಚರವಾಗುವ ಭಾಗವಾಗಿದೆ. ಆದರ್ಶಪ್ರಾಯವಾಗಿ, ಮಾನದಂಡವು ಮಾಪನಾಂಕ ನಿರ್ಣಯಿಸುವ ಸಾಧನದ ೧/೪ ಮಾಪನ ಅನಿಶ್ಚಿತತೆಗಿಂತ ಕಡಿಮೆ ಇರುವುದು. ಗುರಿ ತಲುಪಿದಾಗ, ಅಂತಿಮ ಮಾಪನವು ೪:೧ ಅನುಪಾತವಾದರೆ, ಎಲ್ಲಾ ಮಾನದಂಡಗಳ ಸಂಗ್ರಹಿಸಿದ ಮಾಪನ ಅನಿಶ್ಚಿತತೆಯನ್ನು ಪ್ರಮುಖವಲ್ಲದ್ದು ಎಂದು ಪರಿಗಣಿಸಲಾಗುವುದು. ಈ ಅನುಪಾತವನ್ನು ಕೈಪಿಡಿ 52ಯಲ್ಲಿ ಕ್ರಮಬದ್ಧಗೊಳಿಸಲಾಯಿತು. ಇದು USನ ರಕ್ಷಣಾ ಇಲಾಖೆ ಮಾಪನಶಾಸ್ತ್ರ ಕಾರ್ಯಕ್ರಮದ ವಿವರ MIL-STD-45662Aನಲ್ಲಿ ಸೇರಿಕೊಂಡಿದೆ. ಇಸವಿ ೧೯೫೦ ರಲ್ಲಿ ಪ್ರಾರಂಭವಾದಾಗಿನಿಂದ ೧೯೭೦ ವರೆಗೂ ಅದು ೧೦:೧ ರ ಅನುಪಾತದಲ್ಲಿತ್ತು. ವಿದ್ಯುನ್ಮಾನ ಮಾಪನಗಳಿಗೆ ೧೦:೧ ಅನುಪಾತ ಕಾಣಲು ಆಧುನಿಕ ತಂತ್ರಜ್ಞಾನಗಳಿಗೆ ಸಾಧ್ಯವಾಗಲಿಲ್ಲ.
ಆಧುನಿಕ ಸಾಧನದೊಂದಿಗೆ ೪:೧ ನಿಖರತೆ ಅನುಪಾತ ಕಾಯ್ದುಕೊಳ್ಳುವುದು ಕಷ್ಟದಾಯಕ. ಮಾಪನಾಂಕ ನಿರ್ಣಯಿಸುವ ಪರೀಕ್ಷಾ ಸಾಧನವು ಈಗಿರುವ ಮಾನದಂಡದಷ್ಟೆ ನಿಖರವಾಗಿದೆ. ನಿಖರತೆ ಅನುಪಾತದ ಪ್ರಮಾಣವು ೪:೧ ಕ್ಕಿಂತ ಕಡಿಮೆಯಿದ್ದರೆ, ಅದನ್ನು ಸರಿದೂಗಿಸಲು ಮಾಪನಾಂಕ ನಿರ್ಣಯವು ಸಮತೂಗಿಸುವ ಅಳತೆಯ ವ್ಯತ್ಯಾಸವು ಬಾಳಿಕೆ ಪ್ರಮಾಣವನ್ನು ಕಡಿಮೆಮಾಡುವುದು. ಅನುಪಾತವು ೧:೧ ತಲುಪಿದಾಗ, ಅದು ಮಾನದಂಡದ ನಿಖರ ಹೋಲಿಕೆಯಾಗಿದೆ. ಅಲ್ಲದೇ ಮಾಪನಾಂಕ ನಿರ್ಣಯಿಸುವ ಸಾಧನದ ಮಾಪನಾಂಕ ನಿರ್ಣಯವು ಸಂಪೂರ್ಣ ಸರಿಯಾಗಿರುವುದು. ಈ ವಿಷಯ ಸಾಮರ್ಥ್ಯದೊಂದಿಗೆ ವ್ಯವಹರಿಸುವ ಇನ್ನೊಂದು ವಿಧಾನವೆಂದರೆ ಮಾಪನಾಂಕ ನಿರ್ಣಯಿಸುವ ಸಾಧನದ ನಿಖರತೆಯನ್ನು ಕಡಿಮೆ ಮಾಡುವುದಾಗಿದೆ.
ಉದಾಹರಣೆಗೆ, ೩% ಉತ್ಪಾದಕರು-ನಿಗದಿಪಡಿಸಿದ ನಿಖರತೆಯೊಂದಿಗೆ ಗೇಜ್ ೪% ಕ್ಕೆ ಬದಲಾಗಬಹುದು. ಹಾಗಾಗಿ, ೧% ನಿಖರತೆ ಮಾನದಂಡವನ್ನು ೪:೧ ಅನುಪಾತದಲ್ಲಿ ಬಳಸಲಾಗುವುದು. ಸುಮಾರು ೧೬% ನಿಖರತೆ ಅಗತ್ಯವಿರುವ ಅಪ್ಲಿಕೇಶನ್‌ನಲ್ಲಿ ಗೇಜನ್ನು ಬಳಸಲಾಗಿದ್ದರೆ, ಗೇಜ್ ನಿಖರತೆ 4%ಕ್ಕೆ ಕುಸಿದಿರುವುದು ಅಂತಿಮ ಮಾಪನಗಳ ನಿಖರತೆಯಲ್ಲಿ ಪ್ರಭಾವ ಬೀರುವುದಿಲ್ಲ. ಇದನ್ನು ಸೀಮಿತ ಮಾಪನಾಂಕ ಅಳತೆ ನಿರ್ಣಯ ಎಂದು ಕರೆಯುವರು. ಆದರೆ ಅಂತಿಮ ಮಾಪನಕ್ಕೆ ೧೦% ನಿಖರತೆಯ ಅಗತ್ಯವಿದ್ದರೆ, ೩% ಗೇಜು ೩.೩:೧ ಗಿಂತ ಹೆಚ್ಚು ಉತ್ತಮವಾಗಿರುವುದಿಲ್ಲ. ಪ್ರಾಯಶಃ ಗೇಜ್‌ಗೆ ಮಾಪನಾಂಕ ನಿರ್ಣಯದ ಸಹನೀಯ ವ್ಯತ್ಯಾಸದ ಸಮತೋಲನ ಹೊಂದಿಸುವುದು ಅದಕ್ಕೆ ಉತ್ತಮ ಪರಿಹಾರವಾಗಿರಬಹುದು. ಮಾಪನಾಂಕ ನಿರ್ಣಯವು ೧೦೦ ಘಟಕಗಳಲ್ಲಿ ಕಾರ್ಯನಿರ್ವಹಿಸಿದರೆ, ೧% ಮಾನದಂಡವು ೯೯ ಮತ್ತು ೧೦೧ ಘಟಕಗಳ ನಡುವೆಯಿರುವುದು. ಪರೀಕ್ಷಾ ಸಾಧನದಲ್ಲಿ ಮಾಪನಾಂಕ ನಿರ್ಣಯಗಳ ಅನುಮೋದನೆಯ ಮೌಲ್ಯಗಳು ೪:೧ ಅನುಪಾತದಷ್ಟಿದ್ದು, ಅದರಲ್ಲಿ ೯೬ ಯಿಂದ ೧೦೪ ಘಟಕಗಳಾಗಾಗಿರುವುದು. ಅಂದರೆ ೧೦೩ ಘಟಕಕ್ಕೆ ೯೭ ಕ್ಕೆ ಅನುಮೋದಿತ ವ್ಯಾಪ್ತಿಶ್ರೇಣಿಯನ್ನು ಬದಲಾಯಿಸುವುದರಿಂದ ಎಲ್ಲ ಮಾನದಂಡಗಳ ಸಂಭಾವ್ಯ ಕೊಡುಗೆಯನ್ನು ತೆಗೆದುಹಾಕುವುದು, ಅದಲ್ಲದೇ ೩.೩:೧ ಅನುಪಾತಕ್ಕೆ ಅದನ್ನು ಸಂರಕ್ಷಿಸುವುದು. ಮತ್ತೆ, ೧೦೨ ಘಟಕಕ್ಕೆ ೯೭ ಕ್ಕೆ ಅನುಮೋದಿತ ವ್ಯಾಪ್ತಿ-ಶ್ರೇಣಿಯು ಬದಲಾಯಿಸುವುದರಿಂದ ೪:೧ ಅಂತಿಮ ಅನುಪಾತಕ್ಕಿಂತ ಅಧಿಕವಾಗಿರುವುದು.
ಸರಳ ಉದಾಹರಣೆ ಇಲ್ಲಿದೆ. ಉದಾಹರಣೆಯ ಗಣಿತ ಲೆಕ್ಕಾಚಾರದ ಸಮೀಕರಣವನ್ನು ಪ್ರಸ್ನಿಸಬಹುದಾಗಿದೆ. ವಾಸ್ತವಿಕ ಮಾಪನಾಂಕ ನಿರ್ಣಯದಲ್ಲಿರುವ ಈ ಪ್ರಕ್ರಿಯೆಗೆ ಮಾರ್ಗದರ್ಶಿ ಸೂಚನೆಯು ದಾಖಲಿಸಲ್ಪಡುವುದು, ಅಲ್ಲಿ ಅವುಗಳನ್ನು ಪ್ರವೇಶಿಸಲು ಆಗ ಸಾಧ್ಯವಾಗುವುದು. ಅವಿಧ್ಯುಕ್ತತೆಯ ಹಿಂದಿನ ಮಾಪನಾಂಕ ನಿರ್ಣಯದ ಸಮಸ್ಯೆಗಳನ್ನು ಕಂಡುಹಿಡಿಯಲು ಒಟ್ಟು ಸಂಗ್ರಹದ ಬಾಳಿಕೆ ಮಾಹಿತಿ ಮತ್ತು ಇತರ ಮುಂಬರುವ ಸೂಚ್ಯಾಂಕಗಳನ್ನು ಒದಗಿಸುತ್ತವೆ.
ಮೇಲಿನ ಉದಾಹರಣೆಯಲ್ಲಿ ಸಹ, ಪರಿಪೂರ್ಣವಾಗಿ ೧೦೦ ಘಟಕಗಳ ಮಾಪನಾಂಕ ನಿರ್ಣಯ ಮೌಲ್ಯವು ಏಕ-ಬಿಂದು ಮಾಪನಾಂಕ ನಿರ್ಣಯವನ್ನು ಕಾರ್ಯಗತಗೊಳಿಸಲು ಗೇಜಿನ ವ್ಯಾಪ್ತಿಯಲ್ಲಿ ಉತ್ತಮ ಬಿಂದುವಾಗಿರಬಹುದು. ಇದು ಉತ್ಪಾದಕರ ಶಿಫಾರಸು ಆಗಿರಬಹುದು ಅಥವಾ ಇದು ಈಗಾಗಲೇ ಮಾಪನಾಂಕ ನಿರ್ಣಯಿಸಿದ ಸಾಧನಗಳಿಗೆ ಸಮನಾಗಿರಬಹುದು. ಬಹುಬಿಂದುವಿನ ಅಂಶಗಳ ಅಳತೆ ಮಾಪನಾಂಕ ನಿರ್ಣಯಗಳನ್ನು ಸಹ ಬಳಸಲಾಗಿದೆ. ಸಾಧನ-ಸಲಕರಣೆಯನ್ನು ಅವಲಂಬಿಸಿ ಮೇಲೆ ಶೂನ್ಯ ಘಟಕ ಸ್ಥಿತಿಯನ್ನು ಅನುಸರಿಸಿ ಅದರ ಗೈರುಹಾಜರಿ ಮತ್ತು ಮಾಪನಾಂಕ ನಿರ್ಣಯ ಬಿಂದುವನ್ನು ಅಳೆಯಲಾಗುವುದು. ಆದರೆ ಇಲ್ಲಿ ಬಳಕೆದಾರರಿಂದ ಶೂನ್ಯ ಮಾಪನಾಂಕದಿಂದ ಅಳತೆಯನ್ನು ಮರುಹೊಂದಿಸಬಹುದಾಗಿದೆ-ಆಗ ಹಲವು ವ್ಯತ್ಯಾಸಗಳು ಆಗುವ ಸಾಧ್ಯತೆಗಳಿವೆ. ಮತ್ತೆ ಎಲ್ಲಾ ಒಳ ಅಳತೆ ಕಂಡುಹಿಡಿಯುವ ಮಾಪನಾಂಕ ನಿರ್ಣಯದ ಸಂದರ್ಭದಲ್ಲಿ ಬಳಸಲು ಬಿಂದುಗಳನ್ನು ದಾಖಲಿಸಬೇಕು.
ಮಾನದಂಡ ಮತ್ತು ಮಾಪನಾಂಕ, ಅಂತರವ್ಯಾಸ ನಿರ್ಣಯಿಸುವ ಸಾಧನದ ನಡುವೆ ಸಂಪರ್ಕ ಕಲ್ಪಿಸಲು ನಿರ್ದಿಷ್ಟ ವಿಧಾನಗಳಿವೆ. ಅವುಗಳು ಮಾಪನಾಂಕ ನಿರ್ಣಯದ ಮೇಲೆ ಪ್ರಭಾವ ಬೀರುತ್ತವೆ. ಉದಾಹರಣೆಗೆ, ವಿದ್ಯುನ್ಮಾನ ಮಾಪನಾಂಕ ಅಳತೆಯ ನಿರ್ಣಯಗಳು ಸದೃಶ ವಿಷಯಗಳನ್ನು ಒಳಗೊಂಡಿವೆ. ಭೂಗರ್ಭತಂತಿ ಸಂಪರ್ಕಗಳ ಪ್ರತಿರೋಧವು ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುವುದು.
ಮೇಲಿನ ಎಲ್ಲಾ ಮಾಹಿತಿಯನ್ನು ಮಾಪನಾಂಕ ನಿರ್ಣಯ ವಿಧಾನವಾದ ನಿರ್ದಿಷ್ಟ ಪರೀಕ್ಷಾ ವಿಧಾನದಿಂದ ಸಂಗ್ರಹಿಸಲಾಗಿದೆ. ಈ ಕಾರ್ಯವಿಧಾನಗಳು ಯಶಸ್ವಿ ಮಾಪನಾಂಕ ನಿರ್ಣಯವನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಎಲ್ಲಾ ಹಂತಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಸಂಸ್ಥೆಯ ಇತರ ಎಲ್ಲಾ ಅಗತ್ಯಗಳನ್ನು ಪೂರೈಸಲು ಉತ್ಪಾದಕರು ಒಂದನ್ನು ಒದಗಿಸಬಹುದು, ಅಥವಾ ಒಂದನ್ನು ತಯಾರಿಸಬಹುದು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಗವರ್ನಮೆಂಟ್-ಇಂಡಸ್ಟ್ರಿ ಡಾಟಾ ಎಕ್ಸ್‌ಚೇಂಜ್ ಪ್ರೋಗ್ರಾಮ್‌ನಂತೆ (GIDEP) ಮಾಪನಾಂಕ ನಿರ್ಣಯ ವಿಧಾನಗಳಿಗೆ ಸಂಗ್ರಹಣ-ವಿತರಣ ಕೇಂದ್ರಗಳಿವೆ.
ಈ ಕರಾರುವಕ್ಕಾದ ಪ್ರಕ್ರಿಯೆಯು ಪ್ರಯೋಗಾಲಯದಲ್ಲಿ ಕನಿಷ್ಠ ಅನಿಶ್ಚಿತತೆಯೊಂದಿಗೆ ತಲುಪಿದ ಮಾನದಂಡ, ಪ್ರಮಾಣಿತ ಉಲ್ಲೇಖದ ವಿಷಯ ಮತ್ತು/ಅಥವಾ ಸ್ವಾಭಾವಿಕ ನಿಯತಾಂಕಗಳು, ಮಾಪನ ಮಾನದಂಡಗಳು ವರ್ಗಾವಣೆಯಾಗುವ ತನಕ ಬಳಸಿದ ಪ್ರತಿಯೊಂದೂ ಪುನರಾವರ್ತನೆಯಾಗುವವು. ಈ ಮಾಪನಾಂಕ ನಿರ್ಣಯವು ಪತ್ತೆ ಹಚ್ಚುವ ಸಾಧ್ಯತೆಯನ್ನು ಒದಗಿಸುವುದು.
ಮಾಪನಾಂಕ ನಿರ್ಣಯ ಪ್ರಕ್ರಿಯೆಯ ಅಭಿವೃದ್ಧಿ ಪರಿಗಣಿಸುವ ಇತರ ಅಂಶಗಳಿಗಾಗಿ ಮಾಪನಶಾಸ್ತ್ರವನ್ನು ನೋಡಿ.
ಇದಲ್ಲದೆ, ಮೇಲೆ ಚರ್ಚಿಸಿದ ನಿರ್ದಿಷ್ಟ ಪ್ರಕಾರದ ಪ್ರತ್ಯೇಕ ಸಲಕರಣೆಗಳು ಅಂತಿಮವಾಗಿ ಮಾಪನಾಂಕದೊಂದಿಗೆ ನಿರ್ಣಯಿಸಲಾಗುವುದು. ಸಾಮಾನ್ಯವಾಗಿ ಈ ಪ್ರಕ್ರಿಯೆ ಮೂಲಭೂತ ಹಾನಿಯ ಪ್ರಮಾಣದ ಪರೀಕ್ಷೆಯೊಂದಿಗೆ ಪ್ರಾರಂಭವಾಗುವುದು. ಅಣುಶಕ್ತಿ ಘಟಕಗಳಂತಹ ಕೆಲವು ಸಂಸ್ಥೆಗಳು ದೈನಂದಿನ ನಿರ್ವಹಣೆ ಕಾರ್ಯಗತಗೊಳ್ಳುವ ಮೊದಲು "ದೊರೆತ" ಮಾಪನಾಂಕ ನಿರ್ಣಯ ದತ್ತಾಂಶವನ್ನು ಸಂಗ್ರಹಿಸುತ್ತವೆ. ಮಾಪನಾಂಕ ನಿರ್ಣಯದ ಸಂದರ್ಭದಲ್ಲಿ ಗುರುತಿಸಿದ ದೈನಂದಿನ ನಿರ್ವಹಣೆ ಮತ್ತು ಕೊರತೆಯನ್ನು ಕಂಡುಕೊಂಡ ನಂತರ "ದೊರೆತ" ಮಾಪನಾಂಕ ಅಳತೆಯ ನಿರ್ಣಯವನ್ನು ಕಾರ್ಯಗತಗೊಳಿಸಲಾಗುವುದು.
ಸಾಮಾನ್ಯವಾಗಿ ಮಾಪನಾಂಕ ನಿರ್ಣಯ ತಂತ್ರಜ್ಞರು ಸಂಪೂರ್ಣ ಪ್ರಕ್ರಿಯೆ ಪರಿಶೀಲಿಸುವರು. ಅಲ್ಲದೇ ಮಾಪನಾಂಕ ನಿರ್ಣಯ ಪ್ರಮಾಣಪತ್ರಕ್ಕೆ ಸಹಿ ಮಾಡುವರು. ಇಲ್ಲಿ ಯಶಸ್ವಿ ಮಾಪನಾಂಕ ನಿರ್ಣಯದ ಪೂರ್ಣತೆ ದಾಖಲಾಗುವುದು.
ಮಾಪನಾಂಕ ನಿರ್ಣಯ ಪ್ರಕ್ರಿಯೆಯ ಯಶಸ್ವಿ ಅಂಶಗಳು
[ಬದಲಾಯಿಸಿ]ಈ ಮೇಲೆ ನಿರೂಪಿಸಿದ ಮೂಲ ಪ್ರಕ್ರಿಯೆಯು ಜಟಿಲ ಮತ್ತು ವೆಚ್ಚದಾಯಕ ಸವಾಲಾಗಿದೆ. ಸಾಮಾನ್ಯ ಸಾಧನದ ಬೆಂಬಲಕ್ಕಾಗಿ ಬೆಲೆಯು ಸಾಮಾನ್ಯವಾಗಿ ವಾರ್ಷಿಕ ಆಧಾರದಲ್ಲಿ ಅದರ ಮೂಲ ಖರೀದಿ ಬೆಲೆಯ 10%ರಷ್ಟಿರುವುತ್ತದೆ. ಇದು ಸಾಮಾನ್ಯ ನಿಯಮವಾಗಿ ಅನುಮೋದಿಸಲ್ಪಟ್ಟಿದೆ. ಸ್ಕ್ಯಾನಿಂಗ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು, ಅನಿಲ ಕ್ರೋಮಾಟೊಗ್ರಾಫ್ ಸಿಸ್ಟಮ್ಸ್ ಮತ್ತು ಲೇಸರ್ ಇಂಟರ್ಫೆರೊಮೀಟರ್ ಸಾಧನಗಳಂತಹ ವಿನೂತನ ಸಾಧನಗಳ ನಿರ್ವಹಣೆಯು ತುಂಬಾ ವೆಚ್ಚದಾಯಕ.
ಮಾಪನಾಂಕ ನಿರ್ಣಯ ಕಾರ್ಯಕ್ರಮವು ಸಂಸ್ಥೆಯು ಭಾಗವಹಿಸಿದ ಪ್ರಮುಖ ವಿಶ್ವಾಸಹರತೆಗೆ ತೆರೆದುಕೊಳ್ಳುವುದು. ಸಂಸ್ಥೆಯಾದ್ಯಂತ ಮಾಪನಾಂಕ ನಿರ್ಣಯದ ಸಮಗ್ರತೆಯನ್ನು ಸುಲಭವಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಹೀಗಾದರೆ, ಮಾಪನ ಒದಗಿಸುವ ವೈಜ್ಞಾನಿಕ ಸಿದ್ಧಾಂತ, ಇಂಜಿನಿಯರಿಂಗ್ ಅಭ್ಯಾಸ ಮತ್ತು ದೊಡ್ಡ ಪ್ರಮಾಣದ ಉತ್ಪಾದನೆಯ ನಡುವಿನ ಹೊಸ ಕೆಲಸದ ಪ್ರಾರಂಭದಿಂದ ಕೊಂಡಿಯನ್ನು ಕಳೆದುಕೊಳ್ಳಬಹುದು; ಅಥವಾ ಕ್ರಮೇಣ ಹಳೆಯ ಕೆಲಸದಿಂದ ಸಂಪರ್ಕ ತಪ್ಪಿ ಹೋಗುವುದು.
ಮೂಲ ಮಾಪನಾಂಕ ನಿರ್ಣಯ ಪ್ರಕ್ರಿಯೆ ವಿವರಣೆಯಲ್ಲಿ ಬಳಸಲಾದ 'ಏಕ ಮಾಪನ' ಸಾಧನ ಅಸ್ಥಿತ್ವದಲ್ಲಿರುವುದು. ಆದರೆ, ಉತ್ಪಾದನಾ ಸಂಸ್ಥೆಯನ್ನು ಆಧರಿಸಿ, ಮಾಪನಾಂಕ ನಿರ್ಣಯದ ಅಗತ್ಯವಿರುವ ಸಾಧನಗಳಲ್ಲಿ ಬಹುಪಾಲು ಹಲವು ಶ್ರೇಣಿಗಳನ್ನು ಹೊಂದಿರುತ್ತವೆ. ಅಲ್ಲದೇ ಒಂದು ಸಲಕರಣೆಯಲ್ಲಿ ಹಲವು ಕಾರ್ಯನಿರ್ವಹಣಾ ಸಾಮರ್ಥ್ಯ ಪಡೆದಿರುತ್ತದೆ. ಸಾಮಾನ್ಯ ಆಧುನಿಕ ದೋಲದರ್ಶಕ ಇದಕ್ಕೆ (ವಿದ್ಯುತ್ ಪರಿಮಾಣ) ಉತ್ತಮ ಉದಾಹರಣೆಯಾಗಿದೆ. ಸಂಪೂರ್ಣ ಮಾಪನಾಂಕ ನಿರ್ಣಯಿಸಲು 200,00 ಸಂಯೋಜನೆಗಳಾಗಿ ಸುಲಭದಲ್ಲಿ ಹೊಂದಿಸಬಹುದು. ಅಲ್ಲದೇ ಮಾಪನಾಂಕ ನಿರ್ಣಯವು ಒಳಗೊಂಡಿರುವ ಎಲ್ಲಾ ಮಿತಿಗಳನ್ನು ಸ್ವಯಂಚಾಲಿತಗೊಳಿಸಬಹುದಾಗಿದೆ.
ದೋಲದರ್ಶಕ ಬಳಸುವ ಪ್ರತಿ ಸಂಸ್ಥೆಯು ವಿಶಾಲ ಶ್ರೇಣಿಯ ಮಾಪನಾಂಕ ನಿರ್ಣಯದ ಅಂಕಿ ಅಂಶವನ್ನು ಹೊಂದಿರುತ್ತದೆ. ಒಂದುವೇಳೆ ಗುಣಮಟ್ಟ ಖಾತ್ರಿ ಕಾರ್ಯಕ್ರಮ ಜಾರಿಯಲ್ಲಿದ್ದರೆ, ಗ್ರಾಹಕರು ಮತ್ತು ಕಾರ್ಯಕ್ರಮ ಅನುಸರಿಸುತ್ತಿರುವ ವಿಧಾನಗಳು ಮಾಪನಾಂಕ ಅಳತೆಯ ಅಂಕಿಗಳ ಅಳವಡಿಕೆಗೆ ನೇರ ಪರಿಣಾಮ ಬೀರಬಹುದು. ಹೆಚ್ಚಿನ ದೋಲದರ್ಶಕಗಳು ಸಂಸ್ಥೆಯ ಮೌಲ್ಯ ಹೆಚ್ಚಿಸುವ ಸ್ತಿರಾಸ್ಥಿಗಳಾಗಿವೆ. ಅದಲ್ಲದೆ, ಅವರು ಮಾಡಿದ ಮಾಪನದ ಒಟ್ಟು ಮೊತ್ತದ ಮೌಲ್ಯವನ್ನೂ ಹೆಚ್ಚಿಸುವವು. ಕೆಲವು ದೇಶಗಳಲ್ಲಿ ಸಂಕೀರ್ಣ ತೆರಿಗೆ ನಿಯಮಗಳೊಂದಿಗೆ ೩, ೫, ೧೦ ವರ್ಷಗಳ ಅಥವಾ ಇನ್ನಿತರ ಕಾಲಾವಧಿಗೆ ಪ್ರತ್ಯೇಕ ದೋಲದರ್ಶಕಗಳು ತೆರಿಗೆ ಉದ್ದೇಶಗಳಿಗಾಗಿ ಮೌಲ್ಯ ಇಳಿಕೆಗೆ ಒಳಪಡುವುದು. ಈ ಆಸ್ತಿಗಳ ನಿರ್ವಹಣಾ ಚಟುವಟಿಕೆಗಳ ತೆರಿಗೆ ನಿರ್ವಹಣೆಯು ಮಾಪನಾಂಕ ನಿರ್ಣಯಗಳ ಮೇಲೆ ಪರಿಣಾಮ ಬೀರುವುದು.
ಸಾಮಾನ್ಯವಾಗಿ ಕನಿಷ್ಠ ಐದು ವರ್ಷಗಳಿಗೆ ಹೊಸ ದೋಲದರ್ಶಕಗಳು ತಮ್ಮ ತಯಾರಿಕರಿಗೆ ಬೆಂಬಲ ನೀಡುವುದರಲ್ಲಿ ಮುಂದಿವೆ. ತಯಾರಕರು ನೇರವಾಗಿ ಅಥವಾ ಮಾಪನಾಂಕ ನಿರ್ಣಯ ಮತ್ತು ಹೊಂದಾಣಿಕೆ ಪ್ರಕ್ರಿಯೆಗಳ ವಿವರಗಳೊಂದಿಗೆ ಖಾತ್ರಿಪಡಿಸಿದ ಏಜೆಂಟರ ಮೂಲಕ ಮಾಪನಾಂಕ ನಿರ್ಣಯದ ಸೇವೆಗಳನ್ನು ಒದಗಿಸಬಹುದು.
ಕೆಲವೇ ಸಂಸ್ಥೆಗಳು ಮಾತ್ರ ಒಂದೇ ದೋಲದರ್ಶಕವನ್ನು ಹೊಂದಿವೆ. ಸಾಮಾನ್ಯವಾಗಿ, ಅಂತವರು ಅಸ್ಥಿತ್ವದಲ್ಲಿರುವುದಿಲ್ಲ ಅಥವಾ ದೊಡ್ಡ ಪ್ರಮಾಣದ ಸಮೂಹದಲ್ಲಿರುವರು. ಹಳೆಯ ಸಾಧನಗಳನ್ನು ಕಡಿಮೆ ಬೇಡಿಕೆಯ ಬಳಕೆಗೆ ಕಾಯ್ದಿರಿಸಬಹುದಾಗಿದೆ. ಅದರಿಂದ ಮಿತವಾದ ಮಾಪನಾಂಕ ನಿರ್ಣಯವನ್ನು ಪಡೆಯಬಹುದಾಗಿದೆ. ಅಥವಾ ಯಾವುದೇ ಮಾಪನಾಂಕ ನಿರ್ಣಯವನ್ನು ಪಡೆಯಲಾಗುವುದಿಲ್ಲ. ಉತ್ಪಾದನೆ ಅನ್ವಯಿಕೆಗಳಲ್ಲಿ, ದೋಲದರ್ಶಕಗಳನ್ನು ಲೋಹದ ಚೌಕಟ್ಟಿನಲ್ಲಿ ಇರಿಸಬಹುದಾಗಿದ್ದು, ಇದನ್ನು ಒಂದು ನಿರ್ದಿಷ್ಟ ಉದ್ದೇಶಕ್ಕೆ ಬಳಸಲಾಗುವುದು. ನಿರ್ದಿಷ್ಟ ಉದ್ದೇಶಕ್ಕೆ ಮಾಪನಾಂಕ ನಿರ್ಣಯ ಮಾತ್ರ ಉದ್ದೇಶ ತಿಳಿಯುವುದು.
ಸಂಸ್ಥೆಯಲ್ಲಿರುವ ಕೆಳಗಿನ ಚಿತ್ರದಲ್ಲಿ ತೋರಿಸಿದ ಡಿಜಿಟಲ್ ಮಲ್ಟೀಮೀಟರ್‌ನಂತಹ (DMM) ಪ್ರತಿಯೊಂದು ಮೂಲ ಸಲಕರಣೆ ಪ್ರಕಾರಗಳಿಗೆ ಈ ಸಂಪೂರ್ಣ ಪ್ರಕ್ರಿಯೆ ಪುನರಾವರ್ತನೆಯಾಗುವುದು.
ಈ ಮೇಲಿನ ಚಿತ್ರದಲ್ಲಿ ಗುಣಮಟ್ಟ ಭರವಸೆ ಮತ್ತು ಮಾಪನಾಂಕ ನಿರ್ಣಯದ ನಡುವೆ ಯಾವ ಮಟ್ಟದ ಏಕೀಕರಣದ ವಿಸ್ತರಣೆ ಮಾಡಲಾಗಿದೆ ಎನ್ನುವುದನ್ನು ಪ್ರದರ್ಶಿಸಲಾಗಿದೆ. ಕೊನೆಯ ಬಾರಿ ಮಾಪನಾಂಕ ನಿರ್ಣಯಿಸುವವರೆಗೆ ಸಲಕರಣೆಯನ್ನು ತೆಗೆದುಹಾಕಲಾಗುವುದಿಲ್ಲ; ಎನ್ನುವುದನ್ನು ಖಚಿತಪಡಿಸಲು ಚಿಕ್ಕ ಸಮಾಂತರ ಗಟ್ಟಿಮುಟ್ಟಾದ ಕಾಗದವು ಲೋಹದ ಚೌಕಟ್ಟಿಗೆ ಪ್ರತಿ ಸಲಕರಣೆಯನ್ನು ಸಂಪರ್ಕಿಸುವಂತೆ ಮಾಡುವುದು. ಈ ಮುದ್ರೆಗಳು ಸಲಕರಣೆಯ ಹೊಂದಾಣಿಕೆಗಳಿಗೆ ಪತ್ತೆಮಾಡಲಾಗದ ಅಂಶಗಳ ಪ್ರವೇಶವನ್ನು ತಡೆಯುವುತ್ತವೆ. ಅದರಲ್ಲಿ ಕೊನೆಯ ಮಾಪನಾಂಕ ನಿರ್ಣಯದ ದಿನಾಂಕ ಸೂಚಿಸುವ ಗುರುತಿನ ಬಿಲ್ಲೆಗಳಿರುವುದು. ನಂತರ ಮಾಪನಾಂಕ ನಿರ್ಣಯದ ಅಗತ್ಯವಿದ್ದಾಗ ಅದರ ವ್ಯತ್ಯಾಸ ಇಲ್ಲಿ ಸೂಚನೆ ನೀಡುವುದು. ಕೆಲವು ಸಂಸ್ಥೆಗಳು ಪ್ರತಿ ಸಲಕರಣಗೆ ತಮ್ಮದೇ ಆದ ಗುರುತು ಪತ್ತೆಯ ವಿಧಾನಗಳನ್ನು ಅನುಸರಿಸುತ್ತವೆ.ದಾಖಲೆ ಪ್ರಮಾಣಿಕರಿಸಲು ಮತ್ತು ನಿರ್ದಿಷ್ಟ ಮಾಪನಾಂಕ ನಿರ್ಣಯ ಪರಿಸ್ಥಿತಿಗೆ ಅವಿಭಾಜ್ಯ ಪರಿಕರಗಳ ಪತ್ತೆಗೆ ಪ್ರತಿ ಸಲಕರಣೆಗೆ ಪ್ರತ್ಯೇಕ ಗುರುತನ್ನು ನೀಡುವುದು.
ಸಲಕರಣೆಗಳು ಮಾಪನಾಂಕ ನಿರ್ಣಯಿಸುವಾಗ ಕಂಪ್ಯೂಟರ್‌ಗಳೊಂದಿಗೆ ಸಂಯೋಜನೆಗೊಂಡಿರುವುದು. ಇದರಲ್ಲಿ ಕಂಪ್ಯೂಟರ್ ಕಾರ್ಯಕ್ರಮ ಮತ್ತು ಯಾವುದೇ ಮಾಪನಾಂಕ ನಿರ್ಣಯದ ದೋಷಸರಿಪಡಿಸುವಿಕೆ ಕ್ರಮಗಳು ಸಹ ನಿಯಂತ್ರಣದಲ್ಲಿರುವುದು.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ವೈಯಕ್ತಿಕ ಸಲಕರಣೆಗಳನ್ನು ಗುರುತಿಸಲು ಯಾವುದೇ ಸಾರ್ವತ್ರಿಕವಾಗಿ ಅನುಮೋದಿತ ನಾಮಕರಣಪದ್ಧತಿ ಇಲ್ಲ. ಅಲ್ಲದೆ, ಒಂದೇ ಪ್ರಕಾರದ ಸಾಧನಕ್ಕೆ ಹಲವು ಹೆಸರುಗಳನ್ನು ಹೊಂದಿದ್ದು ಮತ್ತು ಒಂದೇ ಹೆಸರನ್ನು ಬಹುದ್ದೇಶಿತ, ವಿಭಿನ್ನ ಸಾಧನಗಳಿಗೆ ಇರಿಸಲಾಗುವುದು. ಮಾತನಾಡುವ ಶೈಲಿ ಮತ್ತು ಶೀಘ್ರಲಿಪಿಯು ಪರಿಸ್ಥಿತಿಯನ್ನು ಇನ್ನಷ್ಟು ಗೊಂದಲಗೊಳಿಸುವುದು. ಇದು ಕೈಗಾರಿಕಾ ಕ್ರಾಂತಿಯಿಂದ ಉಂಟಾದ ಮುಕ್ತ ಮತ್ತು ತೀವ್ರ ಸ್ಪರ್ಧೆಯನ್ನು ಪ್ರತಿಬಿಂಬಿಸುವುದು.
ಮಾಪನಾಂಕ(ಅಳತೆಯ ಅಂಕಿಗಳ) ನಿರ್ಣಯ ವಿರೋಧಾಭಾಸ
[ಬದಲಾಯಿಸಿ]ಯಶಸ್ವಿ ಮಾಪನಾಂಕ ನಿರ್ಣಯವು ಧೃಢ ಮತ್ತು ವ್ಯವಸ್ಥಿತವಾಗಿದೆ. ಅದೇ ಸಮಯದಲ್ಲಿ, ಕೆಲವು ಸಲಕರಣೆಗಳ ಸಂಕೀರ್ಣತೆಯು ಪ್ರಮುಖ ಕಾರ್ಯಗಳನ್ನು ಗುರುತಿಸುವ ಮತ್ತು ಮಾಪನಾಂಕ ನಿರ್ಣಯಿಸುವ ಅಗತ್ಯವಿದೆ. ಅಂತಹ ಪರಿಸ್ಥಿತಿಗಳಲ್ಲಿ, ಅನಿರೀಕ್ಷಿತ ದೋಷಗಳನ್ನು ಗುರುತಿಸಲು ಅಲ್ಲಿ ನಿಗದಿಯಾದ ಮಟ್ಟವನ್ನು ಕಂಡುಹಿಡಿಯುವ ಅಗತ್ಯವಿದೆ. ಹೆಚ್ಚಾಗಿ ವಾಡಿಕೆಯ ಅನುಕ್ರಮಣಿಕೆಯ ಮಾಪನಾಂಕ ನಿರ್ಣಯವು ಸಹ ಯಾವುದೇ ಸಂದರ್ಭದಲ್ಲಿ ಅನಿರೀಕ್ಷಿತ ಪರೀಕ್ಷೆ ನಡೆಸುವ ಅಗತ್ಯವಿದೆ.
ಸಾಮಾನ್ಯವಾಗಿ, ಓದಲುಬಲ್ಲವರು ಮಾಪನಾಂಕ ನಿರ್ಣಯ ಕಾರ್ಯವಿಧಾನವನ್ನು ಓದಬಹುದು. ಅಲ್ಲದೇ ಅದನ್ನು ಸೂಕ್ತವಾಗಿ ಕಾರ್ಯರೂಪಕ್ಕೆ ತರಲು ಮಾರ್ಗಸೂಚಿಗಳನ್ನು ಅನುಸರಿಸಬಹುದು. ಹೆಚ್ಚು ಸವಾಲಿನ ಕೆಲಸವನ್ನು ಗುರುತಿಸಿ ಅದನ್ನು ಅತ್ಯಂತ ವಿರಳವೆನ್ನುವ ರೀತಿಯಲ್ಲಿನ ಕಾರ್ಯ ಚಟುವಟಿಕೆಗಳಲ್ಲಿ ವ್ಯವಹರಿಸಲಾಗುವುದು. ಹೆಚ್ಚಿನ ಸಂಪನ್ಮೂಲ ಬಳಸುತ್ತಿರುವಲ್ಲಿ ಅನುಭವ ಮತ್ತು ನಿರ್ಣಯದ ಲಕ್ಷಣವನ್ನು ಇದು ಮೂಲಭೂತವಾಗಿ ಒಳಗೊಂಡಿರುತ್ತದೆ.
ಗುಣಮಟ್ಟ
[ಬದಲಾಯಿಸಿ]ಮಾಪನಾಂಕ ನಿರ್ಣಯದ ಗುಣಮಟ್ಟ ಹೆಚ್ಚಿಸಲು ಮತ್ತು ಬಾಹ್ಯ ಸಂಸ್ಥೆಗಳಿಂದ ಅನುಮೋದಿಸಿದ ಫಲಿತಾಂಶ ಪಡೆಯಲು, ಉದ್ದೇಶಪೂರ್ವಕವಾಗಿ ನಿರ್ದಿಷ್ಟಪಡಿಸಿದ ಮಾಪನ ಘಟಕಗಳನ್ನು "ಪತ್ತೆಹಚ್ಚಬಹುದಾದಂತೆ" ಮಾಡಲು ಮಾಪನಾಂಕ ನಿರ್ಣಯಕ್ಕೆ ಮತ್ತು ಮುಂದಿನ ಮಾಪನಗಳಿಗೆ ಇದು ಅವಶ್ಯಕ. ರಾಷ್ಟ್ರೀಯ ಮಾನದಂಡ (USAಯಲ್ಲಿ NIST), ಅಂತಾರಾಷ್ಟ್ರೀಯ ಮಾನದಂಡಗಳು ಅಥವಾ ಪ್ರಮಾಣಿತ ಉಲ್ಲೇಖ ಮಾಹಿತಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಮಾನದಂಡದ ಹೋಲಿಕೆಯಿಂದ ಗುರುತಿಸುವಿಕೆಯು ಮನದಟ್ಟಾಗುತ್ತದೆ.
ಎಲ್ಲಾ ಅಳತೆ ಸಲಕರಣೆಗಳ ನಿರ್ದಿಷ್ಟ ಸ್ವರೂಪ, ಆವರ್ತಕ ಮತ್ತು ದಾಖಲಿತ ಮಾಪನಾಂಕ ನಿರ್ಣಯವನ್ನು ಒಳಗೊಂಡಿರುವ ಪರಿಣಾಮಕಾರಿ ಮಾಪನಶಾಸ್ತ್ರ ವಿಧಾನಕ್ಕೆಗುಣಮಟ್ಟ ನಿರ್ವಹಣೆ ವ್ಯವಸ್ಥೆ ಎನ್ನುವರು. ISO 9000 ಮತ್ತು ISO 17025 ಎನ್ನುವ ಮಾನದಂಡಗಳ ಶ್ರೇಣಿಯಲ್ಲಿನ ಉತ್ತಮ ಮಟ್ಟದಲ್ಲಿರುವ ಪತ್ತೆಹಚ್ಚಬಹುದಾದ ಕಾರ್ಯಗಳ ಅಗತ್ಯವಿದ್ದು, ಅವುಗಳನ್ನು ಹೇಗೆ ಅಳೆಯಬೇಕೆಂದು ನಿರ್ಧರಿಸುವುದು.
ಸಲಕರಣೆ ಮಾಪನಾಂಕ ನಿರ್ಣಯ
[ಬದಲಾಯಿಸಿ]ಮಾಪನಾಂಕ ಅಳತೆಯ ನಿರ್ಣಯ ಹೀಗೂ ಕರೆಯಬಹುದು:
- ಹೊಸ ಸಲಕರಣೆಯೊಂದಿಗೆ
- ನಿರ್ದಿಷ್ಟಪಡಿಸಿದ ಸಮಯ ಮುಗಿದಾಗ
- ನಿರ್ದಿಷ್ಟಪಡಿಸಿದ ಬಳಕೆಯು (ಕಾರ್ಯಾಚರಣೆ ಅವಧಿ) ಮುಗಿದಾಗ,
- ಸಲಕರಣೆಯು ಹಾನಿ ಅಥವಾ ಕಂಪನಕ್ಕೊಳಗಾದರೆ, ಅದು ಮಾಪನಾಂಕ ನಿರ್ಣಯದ ಮೇಲೆ ಸಂಭಾವ್ಯ ಪರಿಣಾಮ ಬೀರುವುದು.
- ಪ್ರಶ್ನಾರ್ಹವಾಗಿ ವೀಕ್ಷಣೆಯ ಗೋಚರತೆ
ವಿಶೇಷವಲ್ಲದ ಬಳಕೆಯಲ್ಲಿ, ಮಾಪನಾಂಕ ನಿರ್ಣಯವು ಹೆಚ್ಚಾಗಿ ನಿರ್ದಿಷ್ಟಪಡಿಸಿದ ನಿಖರತೆಯೊಳಗೆ ಅನ್ವಯಿಸಿದ ಮಾನದಂಡದ ಮೌಲ್ಯದೊಂದಿಗೆ ಹೊಂದಾಣಿಕೆಗೆ ಅನುಕೂಲ ಮಾಡಿಕೊಡುತ್ತದೆ. ಮಾಪನ ಸಲಕರಣೆಯಲ್ಲಿ ಉತ್ಪಾದನೆ ಅಥವಾ ನಿರ್ದೇಶನದ ಹೊಂದಾಣಿಕೆ ಯ ಪ್ರಕ್ರಿಯೆಗೆ ಸಂಬಂಧಿಸಿರುವುದು. ಉದಾಹರಣೆಗೆ, ಥರ್ಮೋಮೀಟರ್ ಮಾಪನಾಂಕವನ್ನು ಗುರುತಿಸಬಹುದು. ಹಾಗಾಗಿ, ತಪ್ಪು ಮಾಹಿತಿ ಅಥವಾ ಸರಿಪಡಿಸುವಿಕೆಯನ್ನು ನಿರ್ಧರಿಸಲಾಗುವುದಲ್ಲದೇ ಅದರ ದೋಷವನ್ನು ಸರಿಪಡಿಸಲಾಗುವುದು. (ಉದಾ. ಮಾಪನಾಂಕ ನಿರ್ಣಯ ನಿಯತಾಂಕ ಮೂಲಕ) ಹಾಗಾಗಿ ಅದು ಅಳತೆಗೋಲಿನಲ್ಲಿ ನಿರ್ದಿಷ್ಟ ನಿರ್ದಿಷ್ಟ ಬಿಂದುವಿನಲ್ಲಿ ಸೆಲ್ಸಿಯಸ್‌ನಲ್ಲಿ ನೈಜ ಉಷ್ಣತೆಯನ್ನು ತೋರಿಸುವುದು.
ಅಂತಾರಾಷ್ಟ್ರೀಯ
[ಬದಲಾಯಿಸಿ]ಹಲವು ದೇಶಗಳಲ್ಲಿ ರಾಷ್ಟ್ರೀಯ ಮಾಪನಶಾಸ್ತ್ರ ಸಂಸ್ಥೆ (NMI) ಅಸ್ಥಿತ್ವದಲ್ಲಿದ್ದು, ಅವು ಮಾಪನಾಂಕ ನಿರ್ಣಯದಿಂದ ಗ್ರಾಹಕರ ಸಲಕರಣೆಗಳಿಗೆ ಪತ್ತೆಹಚ್ಚುವಿಕೆಯನ್ನು ಒದಗಿಸಲು ಬಳಸುವ ಮಾಪನದ ಪ್ರಾಥಮಿಕ ಮಾನದಂಡಗಳನ್ನು ಒದಗಿಸುತ್ತವೆ. (ಮುಖ್ಯ SI ಘಟಕಗಳುಯೊಂದಿಗೆ ಉತ್ಪಾದಿಸಿದ ಘಟಕಗಳ ಸಂಖ್ಯೆ). ಮಾಪನಕ್ಕೆ ಬಳಸಿದ ಸಲಕರಣೆಗೆ ಉತ್ತಮ ಮಟ್ಟದಲ್ಲಿ ಗಟ್ಟಿಮುಟ್ಟಾದ ಸರಪಳಿ ರಚಿಸುವ ಮೂಲಕ, ಆ ದೇಶದಲ್ಲಿ ಮಾಪನ ಶಾಸ್ತ್ರದ ರಚನೆಯನ್ನು NMIವು ಬೆಂಬಲಿಸುವುದು (ಮತ್ತು ಹೆಚ್ಚಾಗಿ ಇತರವುಗಳನ್ನು)ಇದರ ಕೆಲಸವಾಗಿದೆ. UKಯಲ್ಲಿರುವ NPL, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ NIST, ಜರ್ಮನಿಯಲ್ಲಿರುವ PTB ಮತ್ತು ಇನ್ನೂ ಇತರವುಗಳು ರಾಷ್ಟ್ರೀಯ ಮಾಪನಶಾಸ್ತ್ರ ಸಂಸ್ಥೆಗಳಿಗೆ ಉದಾಹರಣೆಗಳಾಗಿವೆ. ಪರಸ್ಪರ ಗುರುತಿಸುವಿಕೆ ಒಪ್ಪಂದ ಸಹಿಹಾಕಿದಾಗಿನಿಂದ, NMI ಭಾಗವಹಿಸುವಿಕೆಯಿಂದಾಗಿ ಪತ್ತೆಹಚ್ಚುವಿಕೆಯನ್ನು ಪ್ರಾಮಾಣಿಕವಾಗಿ ಪಡೆಯಬಹುದಾಗಿದೆ. ಅಲ್ಲದೇ ಕಂಪನಿಯಿರುವ ದೇಶದ NMIಯಿಂದ ಮಾಪನಗಳ ಈ ಚಟುವಟಿಕೆ ನಡೆಸಲು ಕಂಪನಿಗೆ ಅಗತ್ಯವಿರುವುದಿಲ್ಲ.
ಮಾಪನಾಂಕ ನಿರ್ಣಯದ ಗುಣಮಟ್ಟ ತೋರಿಸಲು, ಮಾಪನಾಂಕ ನಿರ್ಣಯ ಮೌಲ್ಯವು ವಿಶ್ವಾಸಾರ್ಯ ಮಟ್ಟ ತಿಳಿಯಲು ಪತ್ತೆಹಚ್ಚಬಹುದಾದ ಅನಿಶ್ಚಿತತೆ ಹೇಳಿಕೆಯಿಂದ ಹೆಚ್ಚಾಗಿ ಸೇರುವುದು. ಇದನ್ನು ಅನಿಶ್ಚಿತತೆ ವಿಶ್ಲೇಷಣೆಯ ಮೂಲಕ ಎಚ್ಚರಿಕೆಯಿಂದ ಪರೀಕ್ಷಿಸುವರು.
ಇವನ್ನೂ ಗಮನಿಸಿ
[ಬದಲಾಯಿಸಿ]- ಮಾಪನಾಂಕ ನಿರ್ಣಯ (ಅಂಕಿಅಂಶಗಳು)
- ಮಾಪನಾಂಕ ನಿರ್ಣಯಿಸಿದ ಜ್ಯಾಮಿತಿ
- ಮಾಪನ ಅನಿಶ್ಚಿತತೆ
- ಬಣ್ಣದ ಸೂಚಿಯಂದಿಗೆ ಮಾಪನಾಂಕ ನಿರ್ಣಯ - ಕಂಪ್ಯೂಟರ್ ಮಾನಿಟರ್ ಅಥವಾ ಪರದೆಯ ಮಾಪನಾಂಕ ನಿರ್ಧರಿಸಲು ಬಳಸುವರು.
- ಸ್ಕೇಲ್ ಟೆಸ್ಟ್ ಕಾರ್ - ರೈಲ್ರೋಡ್ ಕಾರುಗಳನ್ನು ತೂಕ ಮಾಡುವ ತೂಕದ ಮಾಪನಗಳ ಮಾಪನಾಂಕವನ್ನು ನಿರ್ಧರಿಸುವ ಸಾಧನ.
- ಮಾಪನದ ಪದ್ದತಿಗಳು
- ಮಾಪನಾಂಕ ನಿರ್ಣಯ ರೇಖೆ