ವಿಷಯಕ್ಕೆ ಹೋಗು

ತಿದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಗ್ನಿಸ್ಥಳದ ಕೈ ತಿದಿಯ ರೇಖಾಚಿತ್ರ

ತಿದಿಯು ಗಾಳಿಯ ಪ್ರಬಲ ಪ್ರವಾಹವನ್ನು ಒದಗಿಸಲು ನಿರ್ಮಿಸಲಾದ ಸಾಧನ. ಅತ್ಯಂತ ಸರಳ ಬಗೆಯು ಮೆದುವಾದ ಚಕ್ಕಡದ ಪಾರ್ಶ್ವಗಳಿಂದ ಜೋಡಿಸಲಾದ ಹಿಡಿಕೆಗಳುಳ್ಳ ಗಡುಸಾದ ಫಲಕಗಳ ಒಂದು ಜೋಡಿ ಇರುವ ಮೆದುವಾದ ಚೀಲವನ್ನು ಹೊಂದಿರುತ್ತದೆ. ಇದು ಸರಿಸುಮಾರಾಗಿ ಗಾಳಿತೂರದ ಕೋಶವನ್ನು ಆವರಿಸುತ್ತದೆ. ಹಿಡಿಕೆಗಳನ್ನು ನಡೆಸಿ ಈ ಕೋಶವನ್ನು ಹಿಗ್ಗಿಸಬಹುದು ಅಥವಾ ಸಂಕೋಚಿಸಬಹುದು. ಒಂದು ಕವಾಟವನ್ನು ಜೋಡಿಸಲಾಗಿರುತ್ತದೆ ಮತ್ತು ಹಿಗ್ಗಿಸಿದಾಗ ಇದು ಕೋಶದಲ್ಲಿ ಗಾಳಿ ತುಂಬಿಕೊಳ್ಳಲು ಅವಕಾಶ ನೀಡುತ್ತದೆ ಮತ್ತು ಕೋಶವನ್ನು ಸಂಕೋಚಿಸಿದಾಗ ಒಂದು ನಳಿಕೆಯ ಮೂಲಕ ಪ್ರವಾಹವಾಗಿ ಗಾಳಿಯನ್ನು ಹೊರದೂಡಲಾಗುತ್ತದೆ. ಇದು ಅನೇಕ ಅನ್ವಯಗಳನ್ನು ಹೊಂದಿದೆ, ವಿಶೇಷವಾಗಿ ಬೆಂಕಿಗೆ ಗಾಳಿ ಪೂರೈಕೆಮಾಡಲು ಅದರ ಮೇಲೆ ಬೀಸುವುದು.

ಲೋಹವಿದ್ಯೆ

[ಬದಲಾಯಿಸಿ]

ಲೋಹಶಾಸ್ತ್ರದ ಕಬ್ಬಿಣದ ಅದರಿನ ಕರಗಿಸುವಿಕೆ ಮತ್ತು ಬೆಸುಗೆ ಹಾಕುವಿಕೆಯಂತಹ ಹಲವಾರು ಪ್ರಕ್ರಿಯೆಗಳಿಗೆ ಬಹಳಷ್ಟು ಶಾಖ ಬೇಕಾಗುತ್ತದೆ. ಪ್ರಾಚೀನ ಕಾಲದಲ್ಲಿ ತಿದಿಯ ಆವಿಷ್ಕಾರದ ನಂತರವೇ ಈ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲಾಯಿತು. ಇಂಧನಕ್ಕೆ ಹೆಚ್ಚುವರಿ ಗಾಳಿಯನ್ನು ಒದಗಿಸಲು, ದಹನದ ಪ್ರಮಾಣವನ್ನು ಏರಿಸಲು ಮತ್ತು ಹಾಗಾಗಿ ಉಷ್ಣ ಪ್ರದಾನವನ್ನು ಏರಿಸಲು ತಿದಿಯನ್ನು ಬಳಸಲಾಗುತ್ತದೆ.

ಗ್ರಂಥಸೂಚಿ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ತಿದಿ&oldid=976259" ಇಂದ ಪಡೆಯಲ್ಪಟ್ಟಿದೆ