ಕೋಫ಼್ತಾ
ಗೋಚರ
ಕೋಫ಼್ತಾ ಒಂದು ಬಗೆಯ ಮಾಂಸದುಂಡೆ ಅಥವಾ ಮಾಂಸತುಂಡು ಮತ್ತು ಅಫ಼್ಘಾನ್, ಭಾರತೀಯ, ಇರಾನೀ, ಪಾಕಿಸ್ತಾನಿ ಮುಂತಾದ ಪಾಕಪದ್ಧತಿಗಳಲ್ಲಿ ಒಂದು ಜನಪ್ರಿಯ ಖಾದ್ಯವಾಗಿದೆ. ಅತ್ಯಂತ ಸರಳ ರೂಪದಲ್ಲಿ, ಕೋಫ಼್ತಾಗಳು ಸಂಬಾರ ಪದಾರ್ಥಗಳು ಹಾಗೂ/ಅಥವಾ ಈರುಳ್ಳಿಗಳೊಂದಿಗೆ ಮಿಶ್ರಣಮಾಡಿದ ಕೊಚ್ಚಿದ ಅಥವಾ ರುಬ್ಬಿದ ಮಾಂಸದ ಉಂಡೆಗಳನ್ನು- ಸಾಮಾನ್ಯವಾಗಿ ಗೋಮಾಂಸ, ಚಿಕನ್, ಹಂದಿಮಾಂಸ ಅಥವಾ ಕುರಿಮಾಂಸ ಹೊಂದಿರುತ್ತವೆ. ಭಾರತದಲ್ಲಿ, ಸಸ್ಯಾಹಾರಿ ವಿಧಗಳು ಆಲೂಗಡ್ಡೆ, ಸೋರೆಕಾಯಿ, ಪನೀರ್ ಅಥವಾ ಬಾಳೆಯಿಂದ ತಯಾರಿಸಲಾದ ಕೋಫ಼್ತಾಗಳನ್ನು ಒಳಗೊಂಡಿವೆ. ಭಾರತದಲ್ಲಿ ಕೋಫ಼್ತಾಗಳನ್ನು ಸಾಮಾನ್ಯವಾಗಿ ಮಸಾಲೆಭರಿತ ಕರಿ/ಗ್ರೇವಿಯಲ್ಲಿ ಬೇಯಿಸಿ ಬಡಿಸಲಾಗುತ್ತದೆ ಮತ್ತು ಅನ್ನ ಅಥವಾ ಭಾರತೀಯ ಬ್ರೆಡ್‍ಗಳೊಂದಿಗೆ ತಿನ್ನಲಾಗುತ್ತದೆ. ಟರ್ಕಿದೇಶದಲ್ಲಿ ಇನ್ನೂರು ತೊಂಬತ್ತೊಂದು ತರದ ಕೋಫ್ತಾಗಳಿವೆ. ಚುಟ್ಟ ಆಕಾರದ ಕೋಫ್ತಾಗಳನ್ನು ಅರಬ್‍ನಲ್ಲಿ ತಯಾರಿಸುತ್ತಾರೆ.[೧][೨][೩]
ಉಲ್ಲೇಖಗಳು
[ಬದಲಾಯಿಸಿ]- ↑ Abdel Fattah, Iman Adel. "Bites Fil Beit: Koftet el Gambari – Shrimp kofta". Daily News Egypt.
{{cite web}}
: Cite has empty unknown parameter:|dead-url=
(help) - ↑ "Türkiye'nin tam 291 köftesi var". Sabah (in ಟರ್ಕಿಶ್). 6 March 2005.
{{cite news}}
: Cite has empty unknown parameter:|dead-url=
(help) - ↑ Oxford Companion to Food, s.v. kofta