ಕಂಬದಮರ
ಗೋಚರ
ಕಂಬದಮರ | |
---|---|
ಕಂಬದಮರ(ವೀಪಿಂಗ್ ಅಶೋಕ) | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | P. longifolia
|
Binomial name | |
ಪೊಲ್ಯಾಲ್ತಿಯ ಲಾಂಗಿಫೋಲಿಯ |
ಕಂಬದಮರ ಮೂಲತ: ಶ್ರೀಲಂಕಾದ ನಿವಾಸಿ.ಹೆಚ್ಚಾಗಿ ಉದ್ಯಾನವನಗಳಲ್ಲಿ ಅಲಂಕಾರಕ್ಕೆ ಬೆಳೆಸುತ್ತಾರೆ. ಇದನ್ನು ಪುತ್ರಂಜೀವಿ ಹಾಗೂಅಶೋಕ ವೃಕ್ಷಕ್ಕೆ ತಪ್ಪಾಗಿ ತಿಳಿಯುತ್ತಾರೆ.ಪ್ರಪಂಚದೆಲ್ಲೆಡೆ ಅಲಂಕಾರ ಸಸ್ಯವಾಗಿ ಬೆಳೆಸುತ್ತಾರೆ.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಅನೋನಾಸಿ (Anonaceae)ಕುಟುಂಬಕ್ಕೆ ಸೇರಿದ್ದು,ಪಾಲಿಯಾಲ್ತಿಯ ಲಾಂಗಿಫೋಲಿಯ (Polyalthia longifolia) ಎಂದು ಸಸ್ಯಶಾಸ್ತ್ರೀಯ ಹೆಸರಿದೆ.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಸುಂದರವಾದ ನಿತ್ಯಹರಿದ್ವರ್ಣ ಮರ.ಒತ್ತಾದ ಹಂದರ.ಈಟಿ ತಲೆಯಾಕಾರದ ಎಲೆಗಳು ಅಲೆಅಲೆಯಾದ ಅಂಚನ್ನು ಹೊಂದಿದ್ದು,ಹೊಳಪಿನಿಂದ ಕೂಡಿದೆ.ನಕ್ಷತ್ರಾಕಾರದ ಸಣ್ಣ ನಸುಹಳದಿ ಹೂವುಗಳು ಫೆಬ್ರವರಿ-ಎಪ್ರಿಲ್ ತಿಂಗಳಲ್ಲಿ ಕಂಡುಬರುತ್ತದೆ.ಸಾಧಾರಣ ಮೃದುವಾದ ದಾರು ಇದೆ.
ಉಪಯೋಗಗಳು
[ಬದಲಾಯಿಸಿ]ದಾರುವು ಪೆಟ್ಟಿಗೆ,ಪೆನ್ಸಿಲ್ ಮುಂತಾದವುಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ.ತೊಗಟೆಯಿಂದ ಒಳ್ಳೆಯ ನಾರು ದೊರಕುತ್ತದೆ.ಇದರ ಬೀಜಗಳು ಪಕ್ಷಿಗಳಿಗೆ ಬಹಳ ಇಷ್ಟವಾದ ಅಹಾರ.ಎಲೆಗಳು ಅಲಂಕಾರಕ್ಕಾಗಿ ಬಳಸಲ್ಪಡುತ್ತದೆ.ಈ ಮರದಿಂದ ಔಷಧ ತಯಾರಿಕೆ ಬಗ್ಗೆ ಸಂಶೋಧನೆ ನಡೆಯುತ್ತಿದೆ.
ಆಧಾರ ಗ್ರಂಥಗಳು
[ಬದಲಾಯಿಸಿ]- 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.
ಚಿತ್ರಹಾರ
[ಬದಲಾಯಿಸಿ]-
ಚಿಗುರು ಎಲೆಗಳು
-
ಕೊಂಬೆ
-
ಎಲೆಗಳು
-
ಹೂಗಳು
-
ಬೀಜಗಳು