ಸನ್ಮಾನ್ಯ @PriyankKharge ಅವರ ಮಾತುಗಳನ್ನ ಕೇಳ್ದೆ, ಅಲ್ಲೆ ಕೆಳಗಿನ ಟ್ವೀಟಲ್ಲಿ ನಮ್ಮ ಪ್ರಧಾನಿಯವರು ಇವತ್ತು ಮಾತಾಡಿರೋದನ್ನ ಕೇಳ್ದೆ.
ರಾಜಕಾರಣಿಗೆ ವಿದ್ಯಾಭ್ಯಾಸ ಯಾಕೆ ಮುಖ್ಯ ಅಂತ ನಂಗೆ ಅಲ್ಲೇ ಗೊತ್ತಾಯ್ತು.
ಮಕ್ಕಳಿಗೆ ಬೇಕಿರುವುದು ಓದು, ಕೆಲಸ, ಸಂಬಳ, ನೆಮ್ಮದಿಯ ಜೀವನ. #KarnatakaElection2023
1/n
2014 ರಿಂದ ಇಲ್ಲಿಯವರೆಗೂ ದೇಶದ ಜನರ ಭಾವನೆಗಳಿಗೆ ಬೆಂಕಿಯಿಟ್ಟುಕೊಂಡು ಬಂದಿರೋ ಪಕ್ಷವನ್ನ ನಾವು ಗೆಲ್ಲಿಸಿದ್ರೆ ನಮ್ಮ ಆತ್ಮಕ್ಕೆ ನಾವೇ ದ್ರೋಹ ಬಗೆದಂತೆ.
ಕರ್ನಾಟಕವನ್ನ ಮಾರಿ, ಮಕ್ಕಳ ಕೈಲಿ ಚೂರಿ ಕೊಟ್ಟು, ಹೆಗಲ ಮೇಲೆ ಕೇಸರಿ ಶಾಲು ಹೊದಿಸಿ, ಕೊನೆಗೆ ತಮ್ಮ ಚುನಾವಣೆಗಳು ಮುಗಿದ ಮೇಲೆ ಅವರನ್ನು ಬೀದಿಗೆ ತಳ್ಳುತ್ತಾರೆ. ಎಚ್ಚರವಿರಲಿ !! 2/n
ನಾವು ಯಾವುದನ್ನೂ ಮರೆಯಬಾರದು,
- ನೋಟುಗಳ ಬ್ಯಾನ್ - ಅದ್ರಿಂದ ಆರ್ಥಿಕ ಪರಿಸ್ಥಿತಿ ಸರಿಯಾಯಿತೆ?
5 ವರ್ಷ ಕಮ್ಮಿ ಅಂತ ಹೇಳಿಕೊಂಡು 2019ರಲ್ಲಿ ಮತ್ತೆ ಬಂದಿರಲ್ಲ ಸ್ವಾಮಿ. ಎಲ್ಲಿ ದೇಶದ ಆರ್ಥ ವ್ಯವಸ್ಥೆಯ ಸುಧಾರಣೆ? ತೋರಿಸಿ.
- #COVID19 ದೇಶದ ಜನರು ಊರುಗಳಿಗೆ ನಡೆದು, ವ್ಯವಸ್ಥೆಗಳಿಲ್ಲದೆ ಸತ್ತರಲ್ಲ. ಆವಾಗ ಎಲ್ಲಿದ್ರಿ? 3/n
ಸರಿ ಅದಾದ ಮೇಲಾದ್ರು ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಏನೇನು ಕ್ರಮ ಕೈಗೊಂಡಿರಿ?
ಕೊಡಿ ನಿಮ್ಮ Progress report.
ಕರ್ನಾಟಕದ ಆಸ್ಪತ್ರೆಯೊಂದರಲ್ಲಿ ಜನರು ಆಮ್ಲಜನಕವಿಲ್ಲದೆ ಸತ್ರಲ್ಲ. ಅವರ ಕುಟುಂಬಗಳಿಗೆ ಏನು ನಿಮ್ಮ ಸರ್ಕಾರದ ಉತ್ತರ?
ಸಂಪೂರ್ಣ ವೈಫಲ್ಯ - ಇದೇ ನಿಮ್ಮ #progress 4/n
- ಚೆನ್ನಾಗಿ ಓದಿಕೊಂಡು, ಒಟ್ಟಿಗೆ ಕಾಲೇಜಿಗೆ ಹೋಗುತ್ತಿದ್ದ ಹೆಣ್ಣುಮಕ್ಕಳನ್ನು #hijab ಗಲಾಟೆಯಲ್ಲಿ ಸಿಕ್ಕಿಸಿ, ಅವರ ವಿದ್ಯಾಭ್ಯಾಸಕ್ಕೆ ಮಾರಕವಾದರಲ್ಲ. ಅಲ್ಲಿ ನಿಮ್ಮ ಸಂಘಟನೆಯ ಪಾತ್ರವೇನಿತ್ತು ಅಂತ ಸ್ವಲ್ಪ ಹೇಳ್ತೀರ?
ಹೆಣ್ಣುಮಕ್ಕಳನ್ನ ಶಾಲೆಗೆ, ಕಾಲೇಜಿಗೆ ಕರ್ಕೊಂಡು ಬರಬೇಕು ಅಂದ್ರೆ ಎಷ್ಟು ಕಷ್ಟ ಗೊತ್ತಾ ನಿಮಗೆ? 5/n
- #ಕರುನಾಡದ್ರೋಹಿಬಿಜೆಪಿ ಅನ್ನೋ ಪಟ್ಟ ಬರಲು ನಿಮ್ಮ ಸರ್ಕಾರ ಇಲ್ಲಿ ಎಷ್ಟು ಚೆನ್ನಾಗಿ ಕೆಲಸ ಮಾಡಿದೆ ಅಂತ ಗೊತ್ತಾ ನಿಮಗೆ?
ನಾವು ಎಲ್ಲೇ ಹೋದ್ರು ಹಿಂದಿಯಿಂದ ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಕನ್ನಡದ ಅಸ್ಮಿತೆಗೆ ನಿಮ್ಮಲ್ಲಿ ಬೆಲೆಯಿಲ್ಲ. #StopHindiImposition ಅಂತ ನಮ್ಮ ಕೊರಳು ಹರಿಯುವವರೆಗೂ ಕೂಗಬೇಕು ನಾವು. 6/n
- ಇನ್ನು #nandinimilk ತಂಟೆಗೆ ಬಂದು ಸರ್ವಾಧಿಕಾರಿ ಧೋರಣೆ ತೋರೋದ್ರಲ್ಲಿ ನೀವು ಹಿಂದೆ ಬಿದ್ದಿಲ್ಲ. ನಾವು ಏನು ಬೇಕಿದ್ರು ಮಾಡಬಹುದು ಎನ್ನುವ ಅಹಂ ಇರಬಹುದೇನೋ ಗೊತ್ತಿಲ್ಲ.
ನಮ್ಮ ಕೋ-ಆಪರೇಟಿವ್ ಮಾಡೆಲ್ ಇಷ್ಟ ಆದ್ರೆ ನಂದಿನಿಯನ್ನು ಹೊರ ರಾಜ್ಯಗಳಲ್ಲೂ ವ್ಯಾಪಾರ ಮಾಡಿಸಿ. ನಮ್ಮಿಂದ ಅದಕ್ಕೆ ಸಹಕಾರವಿದೆ. 7/n
- #CAA ಪ್ರತಿಭಟನೆಗಳಾದಾಗ ಹೇಗೆ ನೀವು ಹೊಸ ಜೈಲುಗಳನ್ನು ಕಟ್ಟಿಸಿ ಅವುಗಳಿಗೆ ಜನರನ್ನ ಹಿಡಿದು ತುಂಬುವ ಹೊಂಚು ಹಾಕಿದ್ರಿ ಅನ್ನೋದನ್ನ ನಾವು ಮರೆಯಲು ಸಾಧ್ಯವಿಲ್ಲ ಬಿಡಿ.
ಪ್ರಜಾಪ್ರಭುತ್ವದ ಯಾವ ಆಶಯಗಳನ್ನೂ ನೀವು ಈಡೇರಿಸುತ್ತಿಲ್ಲ.
ಎಲ್ಲಾ ಕಡೆ ನಿಮ್ಮ "ಜಿ" ಎನ್ನುವ ಮಾತುಗಳೇ ಝೇಂಕರಿಸುತ್ತಿವೆ. 8/n
ರಾಜ್ಯ ಸರ್ಕಾರದ ವಿಷಯಕ್ಕೆ ಬಂದ್ರೆ, ಪಾಪ ಇವರಿಗೆ ಹಲ್ಲಿಲ್ಲದ ಹಾಗೆ ಮಾಡಿದಿರಿ.
ಕರ್ನಾಟಕ ಭಾರತದಲ್ಲಿ #GDP ಗೆ ಚೆನ್ನಾಗಿ ತೆರಿಗೆ ತೆತ್ತುವ ರಾಜ್ಯವಾದರೂ, ನಮ್ಮ #ಬೆಂಗಳೂರು ಯಾವುದೇ ಮಟ್ಟದಲ್ಲೂ ಸರಿಯಾಗಿ civic amenities ಅನ್ನು ಹೊಂದಿಲ್ಲ. ರೋಡಿನಲ್ಲಿ ಹಳ್ಳಗಳು, ಮರಗಳು ಕಡಿಮೆ (ಒಂದಷ್ಟು ನಿನ್ನೆ ಮೊನ್ನೆ ಕಡಿದಿರಿ) 9/n
ನೀವು ನೋಡಿದ್ರೆ ಎಲ್ಲಾದಕ್ಕೂ #Congress ಕಾರಣ. ಅವ್ರು ಮುಂಚೆ ಹಂಗೆ ಮಾಡಿದ್ರು, ನಾವು ಅವೆಲ್ಲಾ ಸರಿ ಮಾಡ್ತಾ ಇದ್ದೀವಿ ಅನ್ನೋದ್ ಬಿಟ್ರೆ ಇನ್ನೇನು ಇಲ್ಲ ನಿಮ್ಮದು.
ಹೊಸದಾಗಿ ನೀವು 2014ರಲ್ಲಿ ಅಧಿಕಾರಕ್ಕೆ ಬಂದಾಗ ಬಂದರು ಇಲಾಖೆಯಲ್ಲಿ ಉಳಿದಿದ್ದ ಎಷ್ಟೋ ಫೈಲ್‌ಗಳು ಬೇಗ ಮೂವ್ ಆಗ್ತಿವೆ ಅಂತ ಸರ್ಕಾರಿ ಆಫಿಸರ್ ಗೆಳೆಯನೊಬ್ಬ ಹೇಳಿದ್ದ. 10/n
ಯಾಕೆ ಅಂತ ಮೊನ್ನೆ #AdaniScam ಆದಾಗ ಗೊತ್ತಾಯ್ತು.
ಕರ್ನಾಟಕದಲ್ಲಿ ಯಾರ ಮನೆ ಹಾಳು ಮಾಡಬೇಕು ಅಂತ ನಿಮಗೆ ಮತ್ತೆ ನಾವು ಓಟಾಕಬೇಕು?
ಇನ್ನೂ ನಮ್ಮText book revision ವಿಷಯ ಮರೆತಿಲ್ಲ. ನೆನಪಿದೆ. ಹೋರಾಟ ಮಾಡದಿದ್ದರೆ, ನಮ್ಮ ಪಠ್ಯಪುಸ್ತಗಳು ಏನಾಗಿರ್ತಿದ್ವೋ ಇವಾಗ ಗೊತ್ತಿಲ್ಲ. 11/n
ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದ್ದೀರಿ?
ನಿಮ್ಮ ಪಕ್ಷದಲ್ಲಿ ದಲಿತರಿಗೆ, ದಮನಿತರಿಗೆ ಜಾಗವಿಲ್ಲ ಅಂತ ಯಾವಾಗ್ಲೋ ಗೊತ್ತಿದೆ ನಮಗೆ.
ಜಾತಿ, ಧರ್ಮದ ಆಧಾರದಲ್ಲಿ ಸಮಾಜವನ್ನ ಒಡೆಯೋದಕ್ಕೆ ಎಲ್ಲಾರೂ ಕಾಯ್ತಾರೆ, ಆದ್ರೆ ನೀವು ಮುಂಚೂಣಿಯವರು.
ದಲಿತರು ನಿಮಗೆ ಓಟಾಕಿದರೆ, ನಮ್ಮ ಕತ್ತನ್ನ ಕಟುಕನ ಕೈಗೆ ಕೊಟ್ಟಂಗೆ 12/n
We need well educated leaders who know the pulse of common folk.
ಬುದ್ಧ ಬಸವ ಅಂಬೇಡ್ಕರರ ಆದರ್ಶಗಳನ್ನು ಪಾಲಿಸುವವರಿಗೆ ನಮ್ಮ ವೋಟು.
ಓದಿಕೊಳ್ಳಿ, ಇಲ್ಲವಾದರೆ ನೀವು ಪ್ರಚೋದಿಸುವ ಮಂದಿಯೇ ನಿಮಗೆ ಕಂಟಕವಾದಾರು. ಅಂಧಶ್ರದ್ಧೆ ಹಾಗು ಗಂಜಲ ಯಾವಾಗ್ಲೂ ಮಾರಕವೇ. ತಿಳಿದಿರಲಿ. 13/n #KarnatakaElection
• • •
Missing some Tweet in this thread? You can try to
force a refresh
ಕೋವಿಡ್‌ನ ಈ ಸಮಯದಲ್ಲಿ ನಿಮಾನ್ಸ್ ನವರ ಮಾನಸಿಕ ಆಘಾತ ಮತ್ತು ಶೋಕ ಸರಣಿಯು ಬಹಳ ಸೂಕ್ತವಾಗಿದ್ದು ನಮ್ಮೆಲ್ಲರಿಗೂ ಅತ್ಯಮೂಲ್ಯವಾದುದು. ಎಲ್ಲರಿಗೂ ಹಂಚಿ. Grief and Trauma series by NIMHANS which can help many of our friends and families. Please RT 1/5 @readingkafka@karnataka_team
ಕೋವಿಡ್‌ನಿಂದಾಗಿ ಕುಟುಂಬದವರನ್ನು ಕಳೆದುಕೊಂಡಿರುವ ಮಗುವಿನ ಬಗ್ಗೆ ನಿಮಗೆ ತಿಳಿದಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ. Lets learn about Child Adoption laws. Please RT @readingkafka@karnataka_team 1/4
ಕೋವಿಡ್‌ನಿಂದಾಗಿ ಕುಟುಂಬದವರನ್ನು ಕಳೆದುಕೊಂಡಿರುವ ಮಗುವಿನ ಬಗ್ಗೆ ನಿಮಗೆ ತಿಳಿದಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ. Lets learn about Child Adoption laws. Please RT 2/4
ಕೋವಿಡ್‌ನಿಂದಾಗಿ ಕುಟುಂಬದವರನ್ನು ಕಳೆದುಕೊಂಡಿರುವ ಮಗುವಿನ ಬಗ್ಗೆ ನಿಮಗೆ ತಿಳಿದಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ. Lets learn about Child Adoption laws. Please RT. 3/4