ಮಿಂಕ್
ಮಿಂಕ್ |
---|
ಅಮೇರಿಕನ್ ಮಿಂಕ್
(ನೀಯೊಗೇಲ್ ವೈಸನ್) |
Scientific classification |
|
Included groups |
|
ಮಿಂಕ್ ಕಾರ್ನಿವೊರ ಗಣದ ಮಸ್ಟೆಲಿಡೀ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಸ್ತನಿ.[೧][೨] ಮಸ್ಟೆಲ ವೈಸನ್ ಮತ್ತು ಮಸ್ಟೆಲ ಲ್ಯೂಟ್ರಿಯೋಲ ಎಂಬ ಎರಡು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ. ಮೊದಲನೆಯದು ಉತ್ತರ ಅಮೆರಿಕದ ಕಾಡುಗಳಲ್ಲೂ ಎರಡನೆಯದು ಯೂರೊಪಿನಲ್ಲೂ ಏಷ್ಯದ ಉತ್ತರ ಭಾಗಗಳಲ್ಲೂ ವಾಸಿಸುತ್ತವೆ.
ವೀಸಲ್, ಫೆರೆಟ್, ಸ್ಟೋಟ್, ಪೋಲ್‌ಕ್ಯಾಟ್, ಮಾರ್ಟನ್, ಬ್ಯಾಜರ್ ಮುಂತಾದವುಗಳ ಸಂಬಂಧಿಯಾದ ಇದು ತನ್ನ ರೂಪದಲ್ಲೂ ಸ್ವಭಾವದಲ್ಲೂ ಚಟುವಟಿಕೆಯಲ್ಲೂ ಅವನ್ನೇ ಹೋಲುತ್ತದೆ.
ವಿವರ
[ಬದಲಾಯಿಸಿ]ತನ್ನ ಅಚ್ಚುಮೆಚ್ಚಿನ ಆಹಾರವಾದ ಮೀನು, ಏಡಿ, ಕಪ್ಪೆಗಳು ಸುಲಭವಾಗಿ ಸಿಕ್ಕುವಂಥ ನದಿ, ಕೆರೆಕೊಳ್ಳಗಳೇ ಇದರ ವಾಸಸ್ಧಾನ.[೩] ನೆಲದ ಮೇಲೆ ಹೇಗೋ ನೀರಿನಲ್ಲೂ ಹಾಗೆ ಚುರುಕಾಗಿ ಓಡಾಡಿಕೊಂಡಿರುತ್ತದೆ. ಅಮೆರಿಕದ ಮಿಂಕ್ 30-50 ಸೆಂಮೀ ಉದ್ದದ ಹಾಗೂ ಸುಮಾರು 1.5 ಕೆಜಿ ತೂಕದ ಪ್ರಾಣಿ. ಸುಮಾರು 20 ಸೆಂಮೀ ಉದ್ದದ ಪೊದೆಯಂಥ ಬಾಲವೂ ಉಂಟು. ಯೂರೊಪಿನ ಮಿಂಕ್ ಕೊಂಚ ಚಿಕ್ಕಗಾತ್ರದ್ದು. ಮೋಟು ಕಾಲುಗಳು, ಉದ್ದ ಕತ್ತು, ಅಗಲ ಮೂತಿ, ಚಿಕ್ಕ, ಗುಂಡನೆಯ ಕಿವಿಗಳು ಇತರ ಲಕ್ಷಣಗಳು. ಮೈಬಣ್ಣ ತಿಳಿಗಂದಿನಿಂದ ಗಾಢ ಚಾಕೊಲೆಟ್‍ವರೆಗೆ ವ್ಯತ್ಯಾಸವಾಗುತ್ತದೆ. ಮೈಮೇಲೆ ದಟ್ಟ ಮೃದು ತುಪ್ಪಳೂ ಗಾಢವರ್ಣದ ಹೊಳೆಯುವ ಉದ್ದರೋಮಗಳೂ ಇವೆ. ಇದಕ್ಕೆ ಕಟುತೀಕ್ಷ್ಣ ಮತ್ತು ಅಸಹ್ಯ ವಾಸನೆಯುಂಟು.
ಜಲಪ್ರಾಣಿಗಳಲ್ಲದೆ ಇಲಿ, ಹಕ್ಕಿ ಮುಂತಾದ ನೆಲಪ್ರಾಣಿಗಳನ್ನು ಇದು ತಿನ್ನುವುದುಂಟು. ಇದರ ಚಟುವಟಿಕೆಯೆಲ್ಲ ಪ್ರಧಾನವಾಗಿ ರಾತ್ರಿ ವೇಳೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಮಿಂಕ್ ಒಂದು ಸೂಲಿಗೆ 4-10 ಮರಿಗಳನ್ನು ಈಯುತ್ತದೆ. ಮರಿಗಳು ಹುಟ್ಟುವ ಕಾಲ ವಸಂತ. ಕಲ್ಲುಪೊಟರೆಗಳಲ್ಲಿ, ಟೊಳ್ಳುದಿಮ್ಮಿಗಳಲ್ಲಿ ಇಲ್ಲವೆ ಬೇರುಗಳ ಸಂದುಗಳಲ್ಲಿ ಮರಿಗಳನ್ನು ಅಡಗಿಸಿಟ್ಟು ಪೋಷಿಸುತ್ತದೆ. ಲಿಂಕ್ಸ್, ಬಾಬ್‌ಕ್ಯಾಟ್, ನರಿ, ಗೂಬೆ ಹಾಗೂ ಮನುಷ್ಯ ಇದರ ಮುಖ್ಯ ಶತ್ರುಗಳು.
ಮಾನವ ಉಪಯೋಗಗಳು
[ಬದಲಾಯಿಸಿ]ಮಿಂಕ್ ತುಪ್ಪಳು ಚರ್ಮ ಅತ್ಯಂತ ಜನಪ್ರಿಯ ಹಾಗೂ ಬೆಲೆಬಾಳುವ ವಸ್ತುವೆನಿಸಿದೆ. ಇದರಿಂದ ಅನೇಕ ತೆರನ ಉಡುಗೆಗಳನ್ನು ತಯಾರಿಸುವುದಿದೆ. ಕಾಡು ಮಿಂಕ್‌ಗಳಿಂದ ಲಭಿಸುವ ತುಪ್ಪುಳು ಬೇಡಿಕೆಯನ್ನು ಈಡೇರಿಸಲು ಅಸಮರ್ಥವಾಗಿರುವುದರಿಂದ ಮಿಂಕ್‌ಗಳನ್ನು ಸಾಕುವ ವಿಶೇಷ ರೊಪ್ಪಗಳನ್ನೇ ಅಮೆರಿಕದಲ್ಲಿ ಸ್ಧಾಪಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Mink ." The Gale Encyclopedia of Science. . Encyclopedia.com. 17 Nov. 2023 <https://www.encyclopedia.com>.
- ↑ "Mink." New World Encyclopedia, . 10 Mar 2023, 11:06 UTC. 6 Dec 2023, 16:45 <https://www.newworldencyclopedia.org/p/index.php?title=Mink&oldid=1104003>.
- ↑ Burns, John (2008). "Mink," Alaska Department of Fish & Game.
ಹೊರಗಿನ ಕೊಂಡಿಗಳು
[ಬದಲಾಯಿಸಿ]- . . 1914.
{{cite encyclopedia}}
: Cite has empty unknown parameters:|HIDE_PARAMETER10=
,|HIDE_PARAMETER4=
,|HIDE_PARAMETER2=
,|HIDE_PARAMETER13=
,|HIDE_PARAMETER11=
,|HIDE_PARAMETER8=
,|HIDE_PARAMETER6=
,|HIDE_PARAMETER9=
,|HIDE_PARAMETER1=
,|HIDE_PARAMETER3=
,|HIDE_PARAMETER5=
,|HIDE_PARAMETER7=
, and|HIDE_PARAMETER12=
(help) - . Encyclopædia Britannica (11th ed.). 1911.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)
- Pages using the JsonConfig extension
- Pages using duplicate arguments in template calls
- CS1 errors: empty unknown parameters
- Wikipedia articles incorporating citation to the NSRW
- Wikipedia articles incorporating citation to the NSRW with an wstitle parameter
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- ಸಸ್ತನಿ ಪ್ರಾಣಿಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ