ವಿಷಯಕ್ಕೆ ಹೋಗು

ಚಿಮಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಡಗಿಯ ಚಿಮಟ

ಚಿಮಟ ಒಂದು ವಸ್ತುವನ್ನು ಗಿಲ್ಲಲು, ಕತ್ತರಿಸಲು ಅಥವಾ ಎಳೆಯಲು ಯಾಂತ್ರಿಕ ಸೌಕರ್ಯ ಅಗತ್ಯವಾದ ಅನೇಕ ಸಂದರ್ಭಗಳಲ್ಲಿ ಬಳಸಲಾದ ಒಂದು ಕೈ ಉಪಕರಣವಾಗಿದೆ. ಚಿಮಟಗಳು ಮೊದಲ ದರ್ಜೆಯ ಮೀಟುಗೋಲುಗಳಾಗಿವೆ, ಆದರೆ ಪ್ಲೈಯರ್‌ಗಳಿಂದ ಭಿನ್ನವಾಗಿವೆ, ಹೇಗೆಂದರೆ ಚಿಮಟಗಳಲ್ಲಿ ಬಲದ ಕೇಂದ್ರೀಕರಣವು ಒಂದು ಬಿಂದುವಿಗೆ, ಅಥವಾ ಉಪಕರಣದ ಉದ್ದಕ್ಕೆ ಲಂಬವಾಗಿರುವ ಅಂಚಿಗೆ ಇರುತ್ತದೆ. ಇದರಿಂದ ಚಿಮಟವನ್ನು ಒಂದು ಮೇಲ್ಮೈಗೆ ಹತ್ತಿರ ತರುವುದು ಸಾಧ್ಯವಾಗುತ್ತದೆ. ಇದ ಹಲವುವೇಳೆ ಮೊಳೆಗಳೊಂದಿಗೆ ಕೆಲಸಮಾಡುವಾಗ ಬೇಕಾಗುತ್ತದೆ.

ಚಿಮಟಗಳನ್ನು ಮುಖ್ಯವಾಗಿ ಪೂರ್ವದಲ್ಲಿ ಲಗತ್ತಿಸಲಾದ ವಸ್ತುಗಳನ್ನು (ಸಾಮಾನ್ಯವಾಗಿ ಮೊಳೆಗಳು) ಮತ್ತೊಂದು ವಸ್ತುವಿನಿಂದ ಹೊರಗೆ ತೆಗೆಯಲು ಬಳಸಲಾಗುತ್ತದೆ. ಬಡಗಿಯ ಚಿಮಟಗಳು ವಿಶೇಷವಾಗಿ ಈ ಕಾರ್ಯಗಳಿಗೆ ಸೂಕ್ತವಾಗಿರುತ್ತವೆ.

ಹಲವುವೇಳೆ ಕೆಂಪಗೆ ಬಿಸಿಯಾದ ಚಿಮಟವನ್ನು ಪ್ರಾಚೀನ ರೋಮನ್ ಕಾಲದಿಂದ ಅಥವಾ ಅದರ ಮುಂಚಿನಿಂದ ಚಿತ್ರಹಿಂಸೆಯ ಸಾಧನವಾಗಿಯೂ ಬಳಸಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Example of the use of pincers for torture in mediaeval Italy". Pbs.org. Retrieved 2018-04-16.
"https://kn.wikipedia.org/w/index.php?title=ಚಿಮಟ&oldid=978729" ಇಂದ ಪಡೆಯಲ್ಪಟ್ಟಿದೆ